ಕಾಲಭೈರವ ದೇವರನ್ನು ಹೊತ್ತು ಮನೆ ಮನೆಗೆ ತಿರುಗಾಟ, ಜೋಗಿ ಕಟ್ಟುವ ಕಾರ್ಯಕ್ಕೆ ಚಾಲನೆ

Share

Advertisement
Advertisement
Advertisement

ಬೈಂದೂರು:ಹಳಗೇರಿ ಶ್ರೀಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಾಭೈರವ ದೇವಸ್ಥಾನದಲ್ಲಿ ಕಾಲಾನು ಕಾಲದಲ್ಲಿ ನಡೆದು ಬಂದ ಸಂಪ್ರದಾಯದಂತೆ ಜೋಗಿ ಕಟ್ಟುವುದು ಕಾರ್ಯಕ್ರಮ ಶುಕ್ರವಾರ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.ಸುಮಾರು 800 ವರ್ಷಗಳ ಕಾಲ ಇತಿಹಾಸ ಹೊಂದಿರುವ ನಾಥಪರಂಪರೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನ ಸಾಕಷ್ಟು ಇತಿಹಾಸವನ್ನು ಹೊಂದಿರುವ ದೇವಾಲಯಗಳಲ್ಲಿ ಒಂದಾಗಿದೆ.ತೆಂಕಬೆಟ್ಟು ಕ್ಷೇತ್ರದ ಜೋಗಿ ಮನೆತನದವರು ಜೋಗಿ ಕಟ್ಟುವ ಕಾರ್ಯವನ್ನು ಹಲವಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿರುತ್ತಾರೆ.ಇಂದಿನ ಆಧುನಿಕ ಯುಗದಲ್ಲಿಯೂ ಸಹ ಹಿಂದಿನ ಧಾರ್ಮಿಕ ಆಚರಣೆ ಯಥಾವತ್ತಾಗಿ ನಿರ್ವಹಿಸುತ್ತಿರುವುದು ಶ್ರೀ ದೇವರ ಅನುಗ್ರಹದಿಂದಲೇ ಆಗಿದೆ.ಈ ಹಿಂದೆ ಜೋಗಿ ತಿರುಗಾಟ 8 ದಿನಗಳ ನಡೆಯುತ್ತಿದಿತ್ತು.ಬದಲಾವಣೆಯ ಕಾಲಘಟ್ಟದಲ್ಲಿ 3 ದಿನಗಳಿಗೆ ಸೀಮಿತವಾಗಿದೆ.ಮುಖ್ಯವಾಗಿ ಕೋಟೇಶ್ವರದ ಕೋಟಿಲಿಂಗೇಶ್ವರ,ಉಪ್ಪುಂದ ದುರ್ಗಾಪರಮೇಶ್ವರಿ ರಥೋತ್ಸವ ( ಕೊಡಿ ಹಬ್ಬ ) ದ ಆಮಂತ್ರಣವನ್ನು ಪ್ರತಿ ಮನೆ ಮನೆಗೂ ಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಟಿ.ಎಸ್ ನಾಗೇಶ್ ಜೋಗಿ ಅವರು ಜೋಗಿ ಕಟ್ಟುವ ಕಾರ್ಯದ ಬಗ್ಗೆ ಮಾತನಾಡಿ,
ನಾಥ ಪರಂಪರೆಯ ಈ ಧಾರ್ಮಿಕ ಆಚರಣೆಗೆ ಬಹಳಷ್ಟು ಇತಿಹಾಸವಿದೆ.
ದೇವರನ್ನು ಹೊತ್ತು ಕೊಂಡು ಊರಿನ ಪ್ರತಿ ಮನೆಗೂ ಭೇಟಿ ದೇವರ ಪ್ರಸಾದವನ್ನು ಕೊಟ್ಟು, ಕಾಣಿಕೆಯನ್ನು ಸ್ವೀಕರಿಸಲಾಗುತ್ತದೆ.ಮನೆಯ ಒಡತಿ ದೇವರು ಮೂರ್ತಿ ಹೊತ್ತವರ ಪಾದಗಳನ್ನು ನೀರಿನಲ್ಲಿ ತೊಳೆದು ದೇವರನ್ನು ಮನೆ ಬಾಗಿಲಿಗೆ ಆಹ್ವಾನವನ್ನು ಮಾಡಿಕೊಳ್ಳುತ್ತಾರೆ,
ಅರಸಿನ ಕುಂಕುಮ ಲೇಪಿಸಿ, ಪುಷ್ಪಗಳನ್ನು ಸಮರ್ಪಿಸಿ 5 ಪಡಿ(ಭಿಕ್ಷೆ ) ಅಕ್ಕಿ, ತೆಂಗಿನ ಕಾಯಿ, ಭತ್ತ, ಎಲೆ ಅಡಿಕೆ, ಕಾಣಿಕೆ ಕೊಟ್ಟು,ಭಸ್ಮ ಪ್ರಸಾದವನ್ನು ಸ್ವೀಕರಿಸುತ್ತಾರೆ‌ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ರಮೇಶ್ ಜೋಗಿ ಮಾತನಾಡಿ,
ದೇವರು ಮನೆಗೆ ಪ್ರವೇಶ ಮಾಡಿದ ಸಂದರ್ಭ ಮಂತ್ರವನ್ನು ಪಟಿಸುತ್ತ ಢಮರುಕದಲ್ಲಿ ಶಬ್ದ ಹೊರಡಿಸುತ್ತ ” ಶಿವ ಹರ ಸಿದ್ದ ಭೈರವ,ಕಾಲಾಭೈರವ ಗಂಢದರಿ ಗಂಢ ಭೈರವ, ಚಂಡಿಕಾ ಪರಮೇಶ್ವರಿ “
ಹಿಡಿ ತುಂಬಾ ವೀಳ್ಯ, ಮರ ತುಂಬಾ ಭಿಕ್ಷೆ ಕೊಡುವಂತ ಪಡಿ ವೀಳ್ಯ ಫಲ ಶಿವ ಭೈರವನ ಪಾದಕ್ಕೆ ಅರ್ಪಿತ “ಎನ್ನುವ ಮಂತ್ರ ಪಟಿಸುತ್ತ 5 ಪಡಿ ನೀಡಿದ ನಂತರ,
ಶಿವ ಹರ ಜಟಮಣಿ ಮುಕುಟಂ, ನೀಲಕಂಠ0, ಕ್ಷೇತ್ರo, ಕ್ಷೇತ್ರ ಪಾಲಂ “
ಸಂತಾನ ಸಾವಿರವಾಗಲಿ, ಸರ್ವ ಧೂರಿತ ದೂರವಾಗಲಿ, ಪುತ್ರ ಸಂತತಿಯಾಗಿ ಪುಣ್ಯಸ್ತ್ರೀ ವಾಲೆ ಭಾಗ್ಯ ಸ್ಥಿರವಾಗಲಿ, “
ಒಂದು ಭಿತ್ತಿ ನೂರು ಬೆಳೆದು,
ಗಂಗೆ ಗೌರಿ ಎಂಬ ಜೋಡು ಕಣಜ ಕಟ್ಟಿ ಕೋಟಿಲಿಂಗೇಶ್ವರ ಬಾಳಿದ ಹಾಗೆ ಬಾಳಲಿ ” ಎಂದು ಆಶೀರ್ವಾದಿಸಲಾಗುತ್ತದೆ ಎಂದರು.

ಗೋಪಾಲ ಜೋಗಿ ಕೆಳಮನೆ ಮಾತನಾಡಿ,
ಜೋಗಿ ಕಟ್ಟುವ ಕಾರ್ಯವನ್ನು ಈ‌ ಹಿಂದೆ 8 ದಿನಗಳ ವರೆಗೆ ಆಚರಣೆಯನ್ನು ಮಾಡಿಕೊಂಡು ಬರಲಾಗುತ್ತಿತ್ತು.ಆಧುನಿಕ ಯುಗದಲ್ಲಿ ಮೂರು ದಿನಕ್ಕೆ ಸೀಮಿತವಾಗಿದೆ,ಮೊದಲನೇ ದಿನ ಹಳಗೇರಿ ಕ್ಷೇತ್ರದ ಕೊಕ್ಕೆಶ್ವರನ ಸಾನಿಧ್ಯದಲ್ಲಿ ಜೋಗಿ ಕಟ್ಟಿ, ಜೋಗಿ ಮನೆಯ ಸಮೀಪದ ಸನ್ಯಾಸಿ ಬಲ್ಲೆ ಯಲ್ಲಿ ಬಿಂಬಿಸಲಾಗುತ್ತದೆ,
3 ದಿನದ ತಿರುಗಾಟದ ನಂತರ ಕೊನೆಯ ದಿನ ದೇವರಿಗೆ ತಂದಿರುವ ಪಡಿಯನ್ನ ನೈವೇದ್ಯ ರೂಪದಲ್ಲಿ ಸಮರ್ಪಿಸಿ ಊರಿನವರೆಲ್ಲರೂ ಸೇರಿ ಶ್ರೀ ದೇವರಿಗೆ ವಿಶೇಷ ಪೂಜೆ ಸಮರ್ಪಸಿ ಅನ್ನದಾನ ಸೇವೆಯೊಂದಿಗೆ ಕಾರ್ಯಕ್ರಮ ಸಮರ್ಪಣೆ ಗೊಳ್ಳುತ್ತದೆ ಎಂದು ಹೇಳಿದರು.

ನಾಗೇಶ್ ಜೋಗಿ ಅರ್ಚಕರು ಕಡೆಮನೆ ಮಾತನಾಡಿ,
ಸ್ಕಂದ ಪುರಾಣದಲ್ಲಿ ಉಲ್ಲೇಖ ವಿರುವಂತೆ ಈ ಹಿಂದೆ ಬ್ರಹ್ಮ ದೇವರಿಗೂ ಶಿವನಿಗೂ ವಾದಗಳಾಗಿ ಬ್ರಮ್ಮ ದೇವರ 5ನೇ ಅಹಂಕಾರದ ತಲೆಯನ್ನು ಶಿವನು ಭೈರವ ರೂಪಿಯಾಗಿ ಶಿರಚ್ಛೆದ ಮಾಡುತ್ತಾರೆ,ಇದೆ ಬ್ರಹ್ಮನ ಶಿರವು ಬ್ರಹ್ಮ ಕಪಾಲವಾಗಿ ಭೈರವನ ಕೈಯನ್ನು ಸೇರುತ್ತದೆ ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ ಕಪಾಲದ ಹಸಿವಿನ ನಿವಾರಣೆಗಾಗಿ ಭಿಕ್ಷೆ ಬೇಡಲು ತೆರಳಿದರು,ಈ ಪರಂಪರೆಯೇ ಮುಂದೆ ಗುರು ಮತ್ಸೆoದ್ರಾನಾಥರು ಗುರು ಗೊರಕ್ಷನಾಥರು ಹಾಗೂ ನವನಾಥರಾದಿಯಾಗಿ ಎಲ್ಲರೂ ಈ ಪರಂಪರೆಯನ್ನ ಧರ್ಮ ಪ್ರಚಾರ ನಾಥ ಪಂಥದ ಪ್ರಚಾರ ಜೊತೆ ಜೊತೆಗೆ ಮುಂದೆ ನಡೆಸಿಕೊಂಡು ಬಂದಿರುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿಹಿರಿಯರಾದ ಚಂದ್ರ ಜೋಗಿ ತೆಂಕಬೆಟ್ಟು, ಅಣ್ಣಯ್ಯ ಜೋಗಿ ಕೆಳಮನೆ,ಗಣಪಯ್ಯ ಜೋಗಿ ತೆಂಕಬೆಟ್ಟು,ಗಣಪತಿ ಜೋಗಿ ಕೆಳಮನೆ, ಮಹೇಶ್ ಜೋಗಿ ಮೇಲ್ಮನೆ,ಗೋಪಾಲ್ ಜೋಗಿ ಕೆಳಮನೆ,ಚಂದ್ರ ಜೋಗಿ ತೆಂಕಬೆಟ್ಟು ಜಯಂತ್ ಜೋಗಿ ಕೆಳಮನೆ,ಸಮಿತಿಯ ಸದಸ್ಯರು ,ಗ್ರಾಮ ಪಂಚಾಯತ್ ಸದಸ್ಯರಾದ ಸುಬ್ರಮಣ್ಯ ಜೋಗಿ ಕೆಳಮನೆ,ಅರ್ಚಕರಾದ ಜಗದೀಶ್ ಜೋಗಿ ಕಡೆಮನೆ, ರಾಘವೇಂದ್ರ ಜೋಗಿ ನಡುಮನೆ, ಮಾಧವ ಜೋಗಿ ಕಡೆಮನೆ,ದಿನೇಶ ಜೋಗಿ ಕಡೆಮನೆ ,.ಹಾಗೂ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page