ಹಿಂದೂ ಹೆಣ್ಣು ಮಗಳ ಸಾವಿಗೆ ಬಣ್ಣ ಹಚ್ಚುವುದರ ಮೂಲಕ ಕಾಂಗ್ರೆಸ್ ಸರಕಾರ ಮಹಿಳಾ ವಿರೋಧಿ ಚಿಂತನೆಗೆ ಮುಂದೂಡಿ ಇಟ್ಟಿದೆ-ಬಿ.ವೈ ರಾಘವೇಂದ್ರ ವಾಗ್ದಾಳಿ

Share

Advertisement
Advertisement
Advertisement

ಬೈಂದೂರು:ನೇಹಾ ಹಿರೆಮಠ ಎನ್ನುವ ಸಹೋದರಿಯನ್ನು ಕಾಲೇಜು ಆವರಣದಲ್ಲಿ ಚಾಕು ಮೂಲಕ ಚುಚ್ಚಿ ಹತ್ಯೆ ಮಾಡಿರುವ ಕೌರ್ಯ ಜಿಹಾದಿ ಮನಸ್ಥಿತಿಯನ್ನು ಏನು ಎನ್ನುವುದು ಹೊರ ಜಗತ್ತಿಗೆ ವ್ಯಕ್ತವಾಗಿದೆ.ಹಿಂದೂ ಧರ್ಮದ ಯುವತಿ ನೇಹಾಳ ಸಾವಿಗೆ ಬಣ್ಣ ಹಚ್ಚುವುದರ ಮೂಲಕ ಕಾಂಗ್ರೆಸ್ ಸರಕಾರ ಮಹಿಳಾ ವಿರೋಧಿ ಚಿಂತನೆಗೆ ಮುಂದೂಡಿ ಇಟ್ಟಿರುವುದು ನೋವಿನ ಸಂಗತಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಹೇಳಿದರು.
ಬೈಂದೂರು ವಿಧಾನ ಕ್ಷೇತ್ರದ ಕಿರಿಮಂಜೇಶ್ವರದಲ್ಲಿ ಸೋಮವಾರ ನಡೆದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಹಿಳೆಯರ ಕಲ್ಯಾಣಕ್ಕಾಗಿ ಮೋದಿ ಸರಕಾರ ಶೇಕಡಾ 33% ಮೀಸಲಾತಿಯನ್ನು ನೀಡಿದೆ.ಯಡಿಯೂರಪ್ಪ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ಶೇಕಡಾ 50% ಮೀಸಲಾತಿ ನೀಡುವುದರ ಮೂಲಕ ಮಹಿಳೆಯರಪರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಸಮೃದ್ಧ ಬೈಂದೂರು ಕನಸನ್ನು ಇಟ್ಟುಕೊಂಡು ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸಾಧನೆಗಳು ಮಾತನಾಡಬೇಕು,ಮಾತೆ ಸಾಧನೆ ಆಗಬಾರದು ಎಂದರು.
ಚುನಾವಣೆ ಪೂರ್ವದಲ್ಲಿ ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎನ್ನುವ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ.ರಾಜ್ಯದ ಜನರಿಗೆ ಅಕ್ಕಿ ವಿತರಣೆ ಮಾಡುವುತ್ತಿರುವುದು ಮೋದಿ ಸರಕಾರವಾಗಿದೆ.
ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ನೀಡುತ್ತೇವೆ ಎನ್ನುವ ಸುಳ್ಳು ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷ ಮತ್ತೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ.ಸುಳ್ಳುಗಳನ್ನು ಹೇಳಿಕೊಂಡು ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಸಂಸದರು ದೂರಿದರು.
ರೈತರ ಕಲ್ಯಾಣ,ಮಹಿಳಾ ಸಬಲೀಕರಣ, ಯುವಶಕ್ತಿಗೆ ಬಲ ತುಂಬುವ ನಿಟ್ಟಿನಲ್ಲಿ ಮೋದಿಜಿ ಸರ್ಕಾರ ಕೆಲಸವನ್ನು ಮಾಡುತ್ತಿದೆ.65 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶ ಜನರಿಗೆ ಖಾಲಿ ಚೊಂಬು ನೀಡಿದೆ ಇದೆ ಅವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌ ಅವರು ಮಾತನಾಡಿ,800 ಕೋಟಿಗೂ ಅಧಿಕ ವೆಚ್ಚದ ಅನುದಾನದಲ್ಲಿ ಬೈಂದೂರು ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕೊಡುವ ನಿಟ್ಟಿನಲ್ಲಿ ಜಲಜೀವನ್ ಮೆಷಿನ್ ಯೋಜನೆಯಡಿ ನಳ್ಳಿಗಳ ಸಂಪರ್ಕ ಜೋಡಣೆಯನ್ನು ಈಗಾಗಲೇ ಮಾಡಲಾಗಿದೆ.ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಕನಸನ್ನು ಕಾಣುತ್ತಿರುವ ಬಿ.ವೈ ರಾಘವೇಂದ್ರ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಒಂದು ಲಕ್ಷ ಲೀಡ್ ನಲ್ಲಿ ಗೆಲ್ಲಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ರಾಘವೇಂದ್ರ ಅವರಿಗೆ ಒಂದು ಲಕ್ಷ ಲೀಡ್ ಮತ ನೀಡಲು ಈಗಾಗಲೇ ಬೈಂದೂರು ಕ್ಷೇತ್ರದ ಮೂಲೆ ಮೂಲೆಗಳಲ್ಲಿ ಸಭೆಗಳನ್ನು ಮಾಡಲಾಗಿದೆ ಎಂದು ಚುನಾವಣಾ ಪೂರ್ವ ತಯಾರಿ ಕುರಿತು ವಿವರಿಸಿದರು.
ಸಂಸದರಾಗಿ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಿರುವ ಬಿ.ವೈ ರಾಘವೇಂದ್ರ ಅವರು ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 3000 ಕೋಟಿ ರೂ ಹಣ ನೀಡಿದ್ದಾರೆ.ಅನುದಾನಗಳು ಕ್ಷೇತ್ರಕ್ಕೆ ಹರಿದು ಬರುವುದರಿಂದ ಗ್ರಾಮಗಳು ಅಭಿವೃದ್ಧಿ ಗೊಳ್ಳುತ್ತದೆ ಎಂದರು.ಬೈಂದೂರು ಕ್ಷೇತ್ರದ ಮಾದರಿ ಇಟ್ಟುಕೊಂಡು ಕೊಲ್ಲೂರು ಕಾರಿಡಾರ್ ಯೋಜನೆಗೆ ಮಾನ್ಯ ಪ್ರಧಾನ ಮಂತ್ರಿಗಳು ಮುಂದಿನ ದಿನಗಳಲ್ಲಿ ಅಡಿಗಲ್ಲು ಹಾಕಲಿದ್ದಾರೆ ಎಂದು ಭರವಸೆ ನೀಡಿದರು.
ಚಲನಚಿತ್ರ ನಟಿ ಶ್ರುತಿ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ,ಮಹಿಳೆಯರು ಪ್ರತಿ ರಂಗದಲ್ಲಿಯೂ ಮುನ್ನೆಲೆಗೆ ಬರಬೇಕು ಎನ್ನುವುದು ಭಾರತಿ ಜನತಾ ಪಾರ್ಟಿ ಉದ್ದೇಶವಾಗಿದೆ.ಹತ್ತು ವರ್ಷಗಳ ಅವಧಿಯಲ್ಲಿ ಒಂದು ಭ್ರಷ್ಟಾಚಾರ ಮಾಡದ ಕೇಂದ್ರ ಸರ್ಕಾರ ವಿಶ್ವದ ಹತ್ತು ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ.ಭಾರತವನ್ನು ಉಳಿಸುವ ಶಕ್ತಿ ನಾರಿಯರಿಗೆ ಇದೆ ಎನ್ನುವ ವಿಷಯವನ್ನು ನಾವು ಅರಿತಿರುವ ಮೋದಿ ಸರಕಾರ ರಕ್ಷಣಾ ಕ್ಷೇತ್ರದಲ್ಲಿಯೂ ಮೀಸಲನ್ನು ನೀಡಿದೆ ಎಂದು ಹೇಳಿದರು.ಗಡಿಯಲ್ಲಿ ನಾರಿಯರು ದೇಶದ ರಕ್ಷಣೆಗಾಗಿ ಕೈಯಲ್ಲಿ ಗನ್ ಅನ್ನು ಕೈಯಲ್ಲಿ ಹಿಡಿದುಕೊಂಡಿರುವುದು ನಾರಿ ಶಕ್ತಿ ವಿಶ್ವಕ್ಕೆ ತೋರ್ಪಡಿಸಿದೆ.ಡಾ.ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗುತ್ತಿರುವ ನರೇಂದ್ರ ಮೋದಿ ಅವರು ಸ್ತ್ರಿವಾದಿ ಮೂರ್ತಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆ.ಮಾನ್ಯ ಪ್ರಧಾನಿಗಳು ಕೈಗೊಂಡಿರುವ ಯೋಜನೆ ಸಿಂಹಪಾಲು ಮಹಿಳೆಯರ ಪರವಾಗಿದೆ ಎಂದು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಹಾಡಿ ಹೊಗಳಿದರು.ಅವರು ಕೊಟ್ಟಿರುವ ಯೋಜನೆಗಳು ನಾರಿ ಶಕ್ತಿಗೆ ಶಕ್ತಿ ತುಂಬಿದೆ ಎಂದರು.ಯಡಿಯೂರಪ್ಪ ಸರಕಾರ ಸೈಕಲ್ ನೀಡುವುದರ ಮೂಲಕ ಹೆಣ್ಣುಮಕ್ಕಳು ಶಾಲೆ ಕಡೆಗೆ ತೆರಳುವಂತೆ ಮಾಡಿದ ಯೋಜನೆ ಮಾದರಿ ಯೋಜನೆಗಳಲ್ಲಿ ಒಂದಾಗಿದೆ ಮಹಿಳೆ ಮತ್ತು ಸಮಾಜ ಸುಶಿಕ್ಷಿತವಾಗಿ ಇರಲು ಬಿ.ವೈ ರಾಘವೇಂದ್ರ ಅವರಿಗೆ ಮತ ನೀಡಬೇಕೆಂದು ವಿನಂತಿಸಿಕೊಂಡರು.
ಡಾ.ರಾಜ ನಂದಿನಿ ಕಾಗೋಡು ತಿಮ್ಮಪ್ಪ ಅವರು ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ಜೀಹಾದಿಗಳಿಂದ ಹತ್ಯೆಗೆ ಒಳಗಾದ ನೇಹಾಳ ಆತ್ಮಹತ್ಮಕ್ಕೆ ಶಾಂತಿ ಸಿಗಬೇಕಾದರೆ,ಮಹಿಳೆಯರಿಗೆ ರಕ್ಷಣೆ ಸಿಗಬೇಕಾದರೆ
ಮಹಿಳೆಪರ ಕೆಲಸ ಮಾಡುವಂತಹ ಮೋದಿ ಸರಕಾರ ನಮಗೆ ಬೇಕಿದೆ,ಬೇಟಿ ಬಚಾವೋ ಬೇಟಿ ಫಾಡವೋ ಕಾರ್ಯಕ್ರಮದ ಮೂಲಕ ಲಿಂಗ ಸಮಾನತೆಯನ್ನು ಮೋದಿ ಸರಕಾರ ಮಾಡಿದೆ.ಜಿಲ್ಲಾ ಆಸ್ಪತ್ರೆಗಳ ಉನ್ನತೀಕರಣ,ಆಯುಷ್ಮಾನ್ ಕಾರ್ಡ್ ವಿತರಣೆ ಮೂಲಕ ಜನಪರ ಕೆಲಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಕಂಡ ಶ್ರೇಷ್ಠ ನಾಯಕರಾಗಿದ್ದಾರೆ.ಮೋದಿಜೀ ಕೈ ಬಲಪಡಿಸಲು,ಬಿ.ವೈ ರಾಘವೇಂದ್ರ ಅವರಿಗೆ ಮತ ನೀಡಬೇಕೆಂದು ಕೇಳಿಕೊಂಡರು.
ವಿಧಾನ ಪರಿಷತ್ ಸದಸ್ಯೆ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ಹೆಣ್ಣು ಮಕ್ಕಳು ಅಲಂಕಾರ ಮಾಡುವುದು ಸೌಂದರ್ಯಕ್ಕೆ ಅಲ್ಲಾ ಅವಳು ಆರೋಗ್ಯದಿಂದ ಇದ್ದಾಳೆ ಎಂದು ತೋರ್ಪಡಿಸಲು,ಭಾರತದ ದೇಶದ ಇತಿಹಾಸದಲ್ಲಿ ಮಹಿಳೆಯರ ಸಬಲೀಕರಣಕ್ಕೆ ದೊಡ್ಡ ಕೊಡುಗೆ ನೀಡಿದವರು ನರೇಂದ್ರ ಮೋದಿ ಅವರು. ತ್ರಿವಳಿ ತಲಾಕ್ ರದ್ದು, ಅತ್ಯಾಚಾರಿಗೆ ಗಲ್ಲು ಶಿಕ್ಷೆ ನೀಡುವಂತಹ ಕಾನೂನುಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಮಹಿಳೆಯರಪರ ಧ್ವನಿಯಾಗಿ ನಿಂತಿದೆ.ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಮೋದಿ ಸರಕಾರ ಬೆಂಬಲಿಸಿ ಮತ ನೀಡಬೇಕೆಂದರು.
ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮಹಿಳಾ ಮೋರ್ಚಾದ ಪ್ರಮುಖರಾದ ಸಂಧ್ಯಾ ರಮೇಶ್, ಶಿಲ್ಪಾ ಸುವರ್ಣ,ಭಾಗಿರಥಿ, ಶ್ಯಾಮಲಾ ಕುಂದರ್,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಪೂಜಾರಿ, ಉಮೇಶ್ ಶೆಟ್ಟಿ,ಇಂದಿರಾ ಶೆಟ್ಟಿ,ಮಾಲಿನಿ ಕೆ ಉಪಸ್ಥಿತರಿದ್ದರು.ಶ್ಯಾಮಲ ಕುಂದರ್ ಸ್ವಾಗತಿಸಿದರು.
ಪ್ರಿಯದರ್ಶಿನಿ ದೇವಾಡಿಗ ನಿರೂಪಿಸಿದರು.

Advertisement


Share

Leave a comment

Your email address will not be published. Required fields are marked *

You cannot copy content of this page