ಗದ್ದೆಗಿಳಿದು ನಾಟಿ ಮಾಡಿದ ತಾಲೂಕು ಪಂಚಾಯಿತಿ ಇಒ-ಭಾರತಿ ಎನ್

Share

Advertisement
Advertisement
Advertisement

ಕುಂದಾಪುರ:ಜಿಲ್ಲಾ ಪಂಚಾಯತ್ ಉಡುಪಿ ,ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ,ಕೃಷಿ ಇಲಾಖೆ ಉಡುಪಿ ಜಿಲ್ಲೆ,ತಾಲೂಕು ಪಂಚಾಯತ್ ಬೈಂದೂರು, ಗ್ರಾಮ ಪಂಚಾಯತ್ ಕಿರಿಮಂಜೇಶ್ವರ ಅವರ ಸಂಯುಕ್ತ ಆಶ್ರಯದಲ್ಲಿ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿತ್ರಾಡಿ ಯಲ್ಲಿ ಪಾಲಾಕ್ಷ ಸಂಜೀವಿನಿ ಒಕ್ಕೂಟದ ಮಹಿಳೆಯರು ಹಡಿಲು ಬಿದ್ದ ಭೂಮಿಯನ್ನು ನಾಟಿ ಮಾಡುವ ಮೂಲಕ ಕೃಷಿ ಭೂಮಿಗೆ ಜೀವ ಕಳೆ ತಂದಿದ್ದಾರೆ.
ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಎನ್ ಅವರು
ಕರಾವಳಿ ಸಂಪ್ರದಾಯಕ ಶೈಲಿಯ ಹಾಳೆ ಟೋಪಿ ಧರಿಸಿ ಭತ್ತದ ನೇಜಿಯನ್ನು ವಿತರಿಸುವ ಮೂಲಕ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ,ಭಾರತದ ಆರ್ಥಿಕ ವ್ಯವಸ್ಥೆ ಬಲಗೊಳ್ಳಲು ಕೃಷಿ ಮುಖ್ಯವಾಗಿದ್ದು ಇಂದಿನ ಯುವ ಸಮುದಾಯ ಕೃಷಿ ಚಟುವಟಿಕೆ ಸಂಪೂರ್ಣವಾಗಿ ನಿರ್ಲಕ್ಷೀಸಿರುವುದು ಬೇಸರದ ಸಂಗತಿ,ಯುವ ಸಮುದಾಯಕ್ಕೆ ಕೃಷಿ ಮಹತ್ವದ ಬಗ್ಗೆ ಸಾಕಷ್ಟು ಅರಿವು ಮೂಡಿಸಬೇಕಾಗಿದೆ ,ಹಾಗೇಯೆ ಜಿಲ್ಲೆಯಲ್ಲಿ ಸಾಕಷ್ಟು ಭೂಮಿಗಳು ಹಡಿಲು ಬಿಟ್ಟಿದ್ದು ಈ ಭಾರಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಸಂಜೀವಿನಿ ಯೋಜನೆಯಡಿಯಲ್ಲಿ ನೇಮಕಗೊಂಡ ಕೃಷಿ ಸಖಿಯರಿಗೆ ಮುಂಗಾರು ಪ್ರಾರಂಭಕ್ಕೂ ಮೊದಲೆ ಸೂಕ್ತ ತರಬೇತಿ ನೀಡಿ ಹಡಿಲು ಭೂಮಿ ಗುರುತಿಸಿ ಹಡಿಲು ಭೂಮಿಯನ್ನು ಹಸಿರಾಗಿಸುವ ಸಂಕಲ್ಪ ತೊಡಲಾಗಿತ್ತು ಅದರಂತೆ ತಾಲೂಕಿನಾದ್ಯಂತ ಸಂಜೀವಿನಿ ಸಂಘದ ಮಹಿಳೆಯರು ಗುಂಪು ಚಟುವಟಿಕೆಯಾಗಿ ಕೃಷಿಯಲ್ಲಿ ತೊಡಗಿರುವುದು ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಭಾರತಾಂಬೆಯ ಒಡಲು ಹಚ್ಚ ಹಸಿರಿನಿಂದ ಕಂಗೊಳಿಸಲಿ ಆ ತಾಯಿಯ ಮಕ್ಕಳ ಬದುಕು ಹಸನಾಗಲಿ ಇನ್ನು ಹೆಚ್ಚು ಹೆಚ್ಚು ಸಂಜೀವಿನಿ ಸಂಘದ ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗುವಂತಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಗ್ರಾ. ಪಂ. ಉಪಾಧ್ಯಕ್ಷರಾದ ಶ್ರೀ ಶೇಖರ್ ಖಾರ್ವಿ ಮಾತನಾಡಿ ಸಂಜೀವಿನಿ ಸಂಘದ ಮಹಿಳೆಯರು ಒಗ್ಗಟ್ಟಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಸಂತಸದ ವಿಷಯ ಈ ಮಹತ್ಕಾರ್ಯಕ್ಕೆ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಸಧಾ ಬೆಂಬಲ ನೀಡುತ್ತದೆ ಎಂದರು.ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಸುಬ್ಬಣ್ಣ ಶೆಟ್ಟಿ , ರಾಜು ದೇವಾಡಿಗ,ಆನಂದ ಎಸ್ ಪೂಜಾರಿ, ಈಶ್ವರ ದೇವಾಡಿಗ,ಮಾಜಿ ಸದಸ್ಯರಾದ ಮಂಜುನಾಥ ದೇವಾಡಿಗ , ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ರಾಜೇಶ್ ,ಹಾಗೂ ಗ್ರಾ. ಪಂ ಸಿಬ್ಬಂದ್ಧಿ ವರ್ಗ,ಫಾಲಾಕ್ಷ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲಲಿತಾ , ಎನ್ ಆರ್ ಎಲ್ ಎಂ ಸಿಬ್ಬಂದ್ಧಿ ಸವಿತಾ,ಕೃಷಿ ಇಲಾಖೆಯ ಅನುಷಾ, ಮೂಕಾಂಬಿಕಾ ಭತ್ತ ಬೆಳೆಗಾರರ ಸಂಘದ ಸಿಇಓ ಅನಿಲ್ ಉಪಸ್ಥಿತರಿದ್ದರು.ಎಂಬಿಕೆ ನೇತ್ರಾವತಿ ನಿರೂಪಿಸಿ ವಂದಿಸಿದರು.
ಗದ್ದೆಗಿಳಿದ ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಎನ್ ಅವರು ಸಾಲು ನಟ್ಟಿಯಲ್ಲಿ ಪಾಲ್ಗೊಂಡರು.

Advertisement


Share

Leave a comment

Your email address will not be published. Required fields are marked *

You cannot copy content of this page