ವಿಜೇಂದ್ರ ಮಹಾನ್ ಸುಳ್ಳುಗಾರ,ಯಡಿಯೂರಪ್ಪ ಮತ್ತು ಅವರ ಮಕ್ಕಳದ್ದು ಡೋಂಗಿ ಹಿಂದುತ್ವ-ಕೆ.ಎಸ್ ಈಶ್ವರಪ್ಪ ವಾಗ್ದಾಳಿ

Share

Advertisement
Advertisement
Advertisement

ಬೈಂದೂರು:ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷ ಜಾತಿ ರಾಜಕೀಯ ಮಾಡುತ್ತಿರುವುದು ನೋವಿನ ಸಂಗತಿ ಆಗಿದೆ.ಟಿಕೆಟ್ ಹಂಚಿಕೆ ಯಿಂದ ಹಿಡಿದು ಚುನಾವಣಾ ಪ್ರಚಾರದಲ್ಲಿಯು ಜಾತಿ ರಾಜಕೀಯ ಮಾಡುತ್ತಿರುವುದು ರಾಷ್ಟ್ರ ಭಕ್ತ ಬಳಿಗ ವಿರೋಧಿಸುತ್ತದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಾಷ್ಟ್ರಭಕ್ತ ಬಳಗ ಅಭ್ಯರ್ಥಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.
ರಾಷ್ಟ್ರ ಭಕ್ತ ಬಳಗ ಉಪ್ಪುಂದ ಕಛೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಿಂದುತ್ವ ಮತ್ತು ಹಿಂದುತ್ವ ವಿರೋಧ ಕಟ್ಟಿಕೊಂಡವರು ಯಾರು ಇನ್ನೂ ಉದ್ದಾರ ಆಗಿಲ್ಲ.ಯಡಿಯೂರಪ್ಪ ಮತ್ತು ಅವರ ಮಕ್ಕಳದ್ದು ಡೋಂಗಿ ಹಿಂದುತ್ವವಾಗಿದೆ.
ಹಿಂದುತ್ವ ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಕೈಗೆ ಬಿಜೆಪಿ ಪಕ್ಷದ ಚುಕ್ಕಾಣಿ ಸಿಕ್ಕಿದೆ ಅಪ್ಪ ಮಕ್ಕಳು ಜಾತಿ ರಾಜಕಾರಣ ಮಾಡುತ್ತಾ ಕಾಂಗ್ರೆಸ್ ಪಕ್ಷದೊಡನೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಮೂಲ ಕಾರ್ಯಕರ್ತರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಪಕ್ಷ ಶುದ್ಧೀಕರಣ ಆಗಬೇಕು ಮತ್ತು ಹಿಂದುತ್ವ ಮತ್ತು ರಾಷ್ಟ್ರೀಯತೆ ವಿಚಾರಕ್ಕೆ ಮೌಲ್ಯ ದೊರಕಿಸುವ ನಿಟ್ಟಿನಲ್ಲಿ ಇವೊಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಜನರು ಸ್ವಯಂಪ್ರೇರಿತರಾಗಿ ಬೆಂಬಲ ನೀಡುತ್ತಾ, ಸ್ವಾಗತಿಸುತ್ತಿದ್ದಾರೆ.ಅಪ್ಪ ಮಕ್ಕಳ ಜಾತಿ ರಾಜಕಾರಣ ಜನರಿಗೆ ತಿಳಿದಿದೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲುವನ್ನು ಕಾಣಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೂತ್ ಮಟ್ಟದಲ್ಲಿ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಕ್ ಆಗಿರುವುದರಿಂದಲೂ, ಯಡಿಯೂರಪ್ಪ ಅವರ ಹೊಂದಾಣಿಕೆ ರಾಜಕೀಯ ಕಾರಣದಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ ಎಲ್ಲರ ಆಶಯವೂ ನನ್ನ ಗೆಲುವೆ ಮುಖ್ಯವಾಗಿದೆ ಎಂದು ಚುನಾವಣಾ ಪೂರ್ವ ತಯಾರಿ ಕುರಿತು ವಿವರಿಸಿದರು.
ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧ ಮೋಹನ ಅಗರವಾಲ್ ಕೂಡ ನಮ್ಮ ಮನೆಗೆ ಭೇಟಿ ನೀಡಿದ್ದಾರೆ ಮರು ಪರಿಶೀಲನೆ ಮಾಡಿ ಎಂದು ಸೂಚಿಸಿದ್ದಾರೆ ಬ್ರಹ್ಮ ಬಂದು ಹೇಳಿದರು ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ-ಎಂದು ಸ್ಪಷ್ಟ ಪಡಿಸಿದರು.
ಈಶ್ವರಪ್ಪ ಪಕ್ಷಕ್ಕೆ ಮತ್ತು ಹಿಂದುತ್ವ ಉಳಿವಿಗಾಗಿ ಏನು ಕೆಲಸ ಮಾಡಿದ್ದಾರೆ ಎಂದು ಕಾರ್ಯಕರ್ತರಿಗೆ ತಿಳಿದಿದೆ.ಕೇಂದ್ರದ ನಾಯಕರು ಈವಾಗಲೂ ಒತ್ತಡ ಹೇರುತ್ತಿದ್ದಾರೆ.ಅಮಿಶಾ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಪ್ಪ ಮಕ್ಕಳ ಕೈಯಲ್ಲಿ ಇದೆ, ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಪಕ್ಷ ಎನ್ನುವ ವಿಚಾರ ಮರೆತು ಬಿಟ್ಟಿದೆ ಎನ್ನುವ ವಿಚಾರ ತಿಳಿಸಿದ್ದೇನೆ ಎಂದರು.
ನನಗೆ ಸಂಘ ಪರಿವಾರ ದೊರೆತ್ತಿದೆ.ಪರಿವಾರದ ಕಾರ್ಯಕರ್ತರು ಈಗಾಗಲೇ ನನ್ನ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ.ನಾನೊಬ್ಬ ಸ್ವಯಂ ನನಗೆ ಸರಿ ತಪ್ಪು ಕಾಣುತ್ತಿದೆ ಹಾಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸದಾನಂದ ಗೌಡ, ಸಿಟಿ ರವಿ, ಯತ್ನಾಳ್ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಫೋನ್ ಬರುತ್ತಿದೆ ನೀವು ಒಳ್ಳೆ ನಿರ್ಧಾರ ಮಾಡಿದ್ದೀರಿ ಎಂದು ಬೆಂಬಲ ನೀಡುತ್ತಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ನೆರವಾಗಿ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ದೂರಿದರು.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಜಗದೀಶ್ ಶೆಟ್ಟರ್ ಗೂ ಜಾತಿ ಪ್ರೇಮದಿಂದ ಟಿಕೆಟ್ ಕೊಟ್ಟಿದ್ದಾರೆ.ವಿಜೇಂದ್ರ ರಾಜ್ಯಾಧ್ಯಕ್ಷನಾಗಲು ಅಯೋಗ್ಯ.ಮೋಸಗಾರ, ಸುಳ್ಳುಗಾರ ಕೀಳು ಮಟ್ಟದ ರಾಜಕೀಯ ಮಾಡುತ್ತಾನೆ ಎಂದು ವ್ಯಂಗ್ಯವಾಡಿದರು.ಚುನಾವಣೆ ಸಂದರ್ಭದಲ್ಲಿ ಅವನ ಯೋಗ್ಯತೆ ಏನು ಎನ್ನುವುದು ಕೂಡ ಗೊತ್ತಾಗಿದ್ದರಿಂದ ಹೊರಗೆ ಬಂದಿದ್ದೇನೆ ಎಂದರು.
ನಾಮಪತ್ರ ಸಲ್ಲಿಕೆಯಲ್ಲೀ ದಿನ 35,000 ಅಧಿಕ ಸ್ವಯಂ ಪ್ರೇರಿತರಾಗಿ ಬಂದು ಬೆಂಬಲ ಸೂಚಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ಮಾಜಿ ತಾ.ಪಂ ಸದಸ್ಯ ನಾರಾಯಣ ಗುಜ್ಜಾಡಿ ಉಪಸ್ಥಿತರಿದ್ದರು.
ವರದಿ-ಜಗದೀಶ ದೇವಾಡಿಗ

Advertisement


Share

Leave a comment

Your email address will not be published. Required fields are marked *

You cannot copy content of this page