ಡ್ಯಾಂಗಳ ಸ್ಥಿತಿ ಸುಧಾರಣೆ ಆಗಬೇಕು-ಶಾಸಕ ಗಂಟಿಹೊಳೆ

Share

Advertisement
Advertisement
Advertisement

ಕುಂದಾಪುರ:ವೆಂಟೆಡ್ ಡ್ಯಾಂಗಳ ಸ್ಥಿತಿ ಸುಧಾರಣೆ ಆಗಬೇಕು ಎನ್ನುವ ದೃಷ್ಟಿಯಿಂದ ಗ್ರಾಮಸ್ಥರ ಜತೆಗೂಡಿ ಪ್ರತಿಭಟನೆಯನ್ನು ಕೈಗೆತ್ತಿಗೊಳ್ಳಲಾಗಿದೆ.ಸಂಬಂದಪಟ್ಟ ಅಧಿಕಾರಿಗಳು ಸೂಕ್ತವಾದ ಉತ್ತರವನ್ನು ನೀಡದೆ ಪ್ರತಿಭಟನೆಯನ್ನು ಕೈಬೀಡುವ ಪ್ರಶ್ನೆ ಇಲ್ಲಾ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.ಕುಂದಾಪುರ ತಾಲೂಕಿನ ಬೈಂದೂರು ವಿಧಾನ ಸಭಾ ಕ್ಷೇತ್ರದ ಹಕ್ಲಾಡಿ ಗ್ರಾಮದ ತೋಪ್ಲು ಕಿಂಡಿ ಅಣೆಕಟ್ಟಿನ ಅವ್ಯವಸ್ಥೆ ವಿರುದ್ಧ ಬುಧವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ,ಅವರು ಮಾತನಾಡಿದರು.
ಸ್ಥಳೀಯರ ಬೇಡಿಕೆಗೆ ಅಧಿಕಾರಿಗಳು ಸ್ಪಂದನೆ ಮಾಡಬೇಕು,ಪ್ರತಿ ಊರಿನ ವ್ಯವಸ್ಥೆಗೂ ಅಧಿಕಾರಿಗಳು ಕಿವಿ ಗೊಡಬೇಕು.ಜನರ ಉಪಯೋಗಕ್ಕೆ ಅನುಕೂಲವಾಗುವಂತೆ ಡ್ಯಾಂಗಳ ನಿರ್ವಹಣೆಯನ್ನು ಮಾಡಬೇಕು.ಎಲ್ಲೆಲ್ಲಿ ಅವ್ಯವಸ್ಥೆ ಇದೆ ಅದರ ಬಗ್ಗೆ ತನಿಖೆ ಮಾಡಿ ಯೋಜನೆಯ ಲಾಭ ಜನರಿಗೆ ದೊರಕುವಂತೆ ಆಗಬೇಕು.ಅಣೆಕಟ್ಟಿಗೆ ಅಗತ್ಯವಾಗಿರುವ ಹಲಗೆಗಳನ್ನು ಒದಗಿಸಿಕೊಳ್ಳಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.


ಸಣ್ಣ ನೀರಾವರಿ ಇಲಾಖೆ ಅಧಿನಕ್ಕೆ ಒಳಪಟ್ಟಿದ್ದ ಡ್ಯಾಂಗಳು ಜನರ ಉಪಯೋಗಕ್ಕೆ ಬಾರದ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿವೆ.ಜನರ ಅನುಕೂಲಕ್ಕೆ ತಕ್ಕಂತೆ ಯಾವುದೆ ರೀತಿ ವ್ಯವಸ್ಥೆಯನ್ನು ಅಧಿಕಾರಿಗಳು ಕಲ್ಪಿಸುತ್ತಿಲ್ಲ.ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿಯೇ ಬದಲಾದಂತೆ ಇದೆ ಎಂದು ಶಾಸಕರು ತಮ್ಮ ಅಸಾಮಾಧಾನವನ್ನು ಹೊರ ಹಾಕಿದರು.ಜನರಿಗೆ ತೊಂದರೆ ಆದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲಾ ಸದಾ ಕ್ಷೇತ್ರದ ಜನರ ಜತೆ ನಿಂತು ನ್ಯಾಯ ದೊರಕಿಸಿ ಕೊಡುವಂತ ಕೆಲಸವನ್ನು ಮಾಡಲಾಗುವುದು ಎಂದರು.
ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಸುರೇಶ್ ಶೆಟ್ಟಿ ,ಕೃಷ್ಣ ಪ್ರಸಾದ್ ಅಡ್ಯಂತಾಯ,ಹಕ್ಲಾಡಿ ಪಂಚಾಯಿತಿ ಉಪಾಧ್ಯಕ್ಷ ಸುಭಾಷ್ ಶೆಟ್ಟಿ ಹೊಳ್ಮಗೆ,ಮಾಜಿ ಅಧ್ಯಕ್ಷ ಚೇತನ್ ಮೊಗವೀರ,ಸದಸ್ಯರಾದ ಚೇತನ ಹೆಗ್ಡೆ,ಮಂಜು ಮಡಿವಾಳ,ಜ್ಯೋತಿ ಮೊಗವೀರ,ಬಸವ.ಪಿ ನಾಯ್ಕ್,ಭಾಸ್ಕರ ಪೂಜಾರಿ,ಸ್ಥಳೀಯರಾದ ಸುರೇಂದ್ರ ಪೂಜಾರಿ,ಮಹೇಶ್ ಮೊಗವೀರ,ಗ್ರಾಮಸ್ಥರು ಉಪಸ್ಥಿತರಿದ್ದರು.ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ,ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪುನೀತ್ ಮತ್ತು ನಾಗಲಿಂಗಯ್ಯ.ಆರ್.ಐ ರಾಘವೇಂದ್ರ ದೇವಾಡಿಗ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.ಗಂಗೊಳ್ಳಿ ಠಾಣೆ ಪಿಎಸ್‍ಐ ಬಸವರಾಜ ಕನಶೆಟ್ಟಿ (ತನಿಖೆ) ಮತ್ತು ಸಿಬ್ಬಂದಿಗಳು ಹಾಜರಿದ್ದರು.

(ಕಿಂಡಿ ಅಣೆಕಟ್ಟಿನ ಅವ್ಯವಸ್ಥೆ ವಿರುದ್ಧ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಗ್ರಾಮಸ್ಥರ ಜತೆಗೂಡಿ ಬುಧವಾರ ಪ್ರತಿಭಟನೆಯನ್ನು ನಡೆಸಿದರು)

Advertisement


Share

Leave a comment

Your email address will not be published. Required fields are marked *

You cannot copy content of this page