ಕಸ್ತೂರಿ ರಂಗನ್ ವರದಿ ವಿರೋಧಿಸಿ:ಇಡೂರು,ಕುಂಜ್ಞಾಡಿ,ಹೊಸೂರು ಗ್ರಾಮಸ್ಥರಿಂದ ಪ್ರತಿಭಟನೆ

Share

Advertisement
Advertisement
Advertisement

ಕುಂದಾಪುರ:ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ  ಕುಂದಾಪುರ ತಾಲೂಕಿನ ಇಡೂರು ಕುಂಜ್ಞಾಡಿ, ಹೊಸೂರು ಗ್ರಾಮಸ್ಥರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಭಾನುವಾರ ಹೊಸೂರು ದುರ್ಗಾ ಸಭಾಭವನದಲ್ಲಿ ನಡೆಯಿತು.
ಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಆಚಾರ್ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಉಡುಪಿ ಜಿಲ್ಲೆಯ ಬೈಂದೂರು ಕುಂದಾಪುರ ಕಾರ್ಕಳ ಮೂರು ಕ್ಷೇತ್ರಗಳು ಹೆಚ್ಚು ಸಂತ್ರಸ್ತರು ಇದ್ದಾರೆ ಎಂದು ಹೇಳಲು ಸಾಧ್ಯವಿದೆ.ಸಚಿವರಿಗೆ ಮಾತನಾಡುವುದು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದಿಂದ ಗಮನಕ್ಕೆ ತಂದಿದ್ದೇವೆ.ನಮ್ಮ ನಿರೀಕ್ಷೆ ಇರುವುದು ಈ ಕೆಲಸ ಆಗಬೇಕು.ಇಲ್ಲದದ್ದರೆ ಈ ವಿಷಯ ಇನ್ನೂ ಗಂಭೀರತೆಗೆ ಹೋಗುತ್ತದೆ.ಆ ಹೋರಾಟ ಕೂಡ ವಿಪರೀತವಾಗುತ್ತದೆ. ನಾವು ಕೇಳುತ್ತಿರುವುದು ನಮಗೆ ಮ್ಯಾನುವೆಲ್ ಸರ್ವೆ ಆಗಬೇಕು,ಅಲ್ಲಿನ ಪಂಚಾಯತ್ ಸಭೆಯ ನಿರ್ಣಯಗಳು,ಅಲ್ಲಿನ ಜನರ ಜನಾಭಿಪ್ರಾಯಗಳನ್ನು ಪಡೆಯಬೇಕು ಎಂದರು.
ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಅವರು ಮಾತನಾಡಿ, ಪಶ್ಚಿಮ ಘಟ್ಟ ಪ್ರದೇಶಗಳ ಉಳಿವಿಗಾಗಿ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಜಾರಿ ಮಾಡುವ ಕುರಿತಂತೆ ಕೇಂದ್ರ ಸರಕಾರವು ಆರನೇ ಅಧಿಸೂಚನೆ ಹೊರಡಿಸಿದ್ದು, ಅದು ಈಗ ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಈ ಅವೈಜ್ಞಾನಿಕ ವರದಿ ಜಾರಿಯನ್ನು ವಿರೋಧಿಸಿ,ಈ ವರದಿಯಲ್ಲಿರುವ ಕೃಷಿಭೂಮಿ ಹಾಗೂ ಜನವಸತಿ ಪ್ರದೇಶಗಳನ್ನು ಕೈಬಿಟ್ಟು ನೈಸರ್ಗಿಕ ಅರಣ್ಯಗಳನ್ನು ಮಾತ್ರ ವರದಿಯ ವ್ಯಾಪ್ತಿಗೆ ಒಳಪಡಿಸಬೇಕು ಅನ್ನುವ ಹಳ್ಳಿಗರ ಹಕ್ಕೊತ್ತಾಯ ಜಿಲ್ಲೆಯಾದ್ಯಂತ ಬಲಗೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ
ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಬ್ಲಾಡಿ ಎನ್ ಮಂಜಯ್ಯ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ್ ಶೆಟ್ಟಿ,
ವಿಕಾಸ ಹೆಗ್ಡೆ
ವಂಡ್ಸೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ ಅತುಲ್ ಕುಮಾರ್ ಶೆಟ್ಟಿ, ಜಡ್ಕಲ್ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಸದಸ್ಯ ವಿ.ಜೆ. ದೇವದಾಸ್, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ವಂಡ್ಸೆ, ವಕೀಲ ಕೆ ಬಾಲಕೃಷ್ಣ ಶೆಟ್ಟಿ, ಹೊಸೂರು ಗ್ರಾಮ ಪಂಚಾಯತ್ ಸದಸ್ಯರಾದ ಅಮೀನ್ ಶೆಟ್ಟಿ, ಅಶೋಕ್ ಶೆಟ್ಟಿ ದೇವಲ್ಕುಂದ, ಶಂಕರ್ ಆಚಾರ್ಯ, ಅಮೀನ್ ಶೆಟ್ಟಿ, ಸಂತೋಷ್ ಶೆಟ್ಟಿ, ಜಯಶ್ರೀ, ಪದ್ಮಾವತಿ, ಸಿಂಗಾರಿ ನಾಯ್ಕ್, ರಾಘವೇಂದ್ರ ಪೂಜಾರಿ, ಸುಮತಿ ಆಚಾರ್ಯ, ಸುಮತಿ ಗೌಡ, ಉಡುಪಿ ಜಿಲ್ಲಾ ಗ್ರಾಹಕರ ಹಿತರಕ್ಷಣೆ ವೇದಿಕೆಯ ಕಾರ್ಯದರ್ಶಿ ಜಿ.ಬಿ ಮೋಹನ್ ವಿವಿಧ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಹೊಸೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರವೀಣ್  ಶೆಟ್ಟಿ ಹೊಸೂರು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page