ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.ಕುವೆಂಪು ಯುನಿರ್ವಸಿಟಿ ಶ್ರೀ ಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜು ಶಂಕರಗಟ್ಟ ಶಿವಮೊಗ್ಗ ದಿಂದ ಪ್ರವಾಸಕ್ಕೆ ಬಂದಿದ್ದ ಬಿ.ಕಾಂ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಟೂರಿಸ್ಟ್ ಬಸ್ ತ್ರಾಸಿ-ಮರವಂತೆ ಬಸ್ ಚಾಲನೆಗೊಂಡ ಅನತಿ ದೂರದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಮರವಂತೆ–ತ್ರಾಸಿ ಬೀಚ್‍ನ ಮುಂಭಾಗ […]

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ ನಿರ್ದೇಶಕರಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಸುರೇಂದ್ರ ಗುಡ್ಡೆಹೋಟೆಲ್ ನಾಡ ಅವರು ಆಯ್ಕೆಯಾಗಿದ್ದಾರೆ.ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಟಿ ವೆಂಕಟೇಶಯ್ಯ ಅವರು ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.ಅಧ್ಯಕ್ಷೆ ಸುಮಿತ್ರ ಮಾರುತಿ ದುರ್ಗಿ,ಉಪಾಧ್ಯಕ್ಷ ಬಸವರಾಜು ಹಟ್ಟಿಹೊಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸುರೇಂದ್ರ ಗುಡ್ಡೆಹೋಟೆಲ್ ಅವರು ಪ್ರಸ್ತುತ ಶ್ರೀ ಸಿದ್ದಲಿಂಗೇಶ್ವರ ಕನ್ನಡ ಪ್ರೌಢಶಾಲೆಯಲ್ಲಿ (ಮಾಗಡಿ ರಸ್ತೆ ಬೆಂಗಳೂರು ದಕ್ಷಿಣ ಜಿಲ್ಲೆ) ಅಧ್ಯಾಪಕರಾಗಿ […]

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ ವಸತಿ ಶಾಲೆ ಸಹೋದರ ವಿದ್ಯಾರ್ಥಿಗಳಾದ ಅನ್ವಿಶ್ ಕುಮಾರ್ ಪ್ರಥಮ ಸ್ಥಾನ ಪಡೆದು ವಿನ್ನರ್ ಪ್ರಶಸ್ತಿ ಜಯಿಸಿದ್ದಾರೆ ಹಾಗೂ ವಿನಿಶ್ ಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ.ಶಿಕ್ಷಕಿ ಅನುಷಾ ಸಿ ಬಂಗೇರಾ ಗಂಗೊಳ್ಳಿ ಮತ್ತು ಕಾವ್ರಾಡಿ ವಿಜಯ್ ಕುಮಾರ್ ದಂಪತಿ ಪುತ್ರರರು.ಕುಂದಾಪುರ ಸೆಂಟರ್ ಪ್ರಸನ್ನ ಕೆ.ಬಿ,ಗಂಗೊಳ್ಳಿ ಸೆಂಟರ್‍ನ ಶಿಕ್ಷಕಿ ಸುನೀತಾ ತರಬೇತಿ ನೀಡಿದ್ದರು.

You cannot copy content of this page