ಹೆಮ್ಮಾಡಿ:ಅವೈಜ್ಞಾನಿಕ ಕಾಮಗಾರಿ ಸ್ಥಳಿಯರಿಂದ ಪ್ರತಿಭಟನೆ

ಕುಂದಾಪುರ:ಹೆಮ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟು ಎಂಬಲ್ಲಿ ತೋಡು ಹೂಳೆತ್ತದೆ ಹಾಗೂ ನಾದುರಸ್ತಿಯಲ್ಲಿರುವ ಮೋರಿಯನ್ನು ದುರಸ್ತಿ ಗೊಳಿಸದೇ ಅವೈಜ್ಞಾನಿಕವಾಗಿ ರಿವಿಟ್ ಮೆಂಟ್ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಬುಧವಾರ ಸಿಪಿಎಂ ಪಕ್ಷದ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.ಗ್ರಾಮ ಪಂಚಾಯಿತಿಯ ಕ್ರಮವನ್ನು ಖಂಡಿಸಿ ಎಲ್ಲರಿಗೂ ಉಪ ಯೋಗ ವಾಗುವ ರೀತಿಯಲ್ಲಿ ಕಾಮ ಗಾರಿ ನಡೆಸಿ ಎಂದು ಆಗ್ರಹಿಸಿದರು.ಅಸಮರ್ಪಕ ಕಾಮಗಾರಿ ಯಿಂದ ನೀರು ಸರಾಗವಾಗಿ ಹರಿದು ಹೋಗಲು ತಡೆಯಾಗಿ ಬೇಸಾಯದ ಬೆಳೆ ನಾಶವಾಗುತ್ತದೆ.ಈ ಕುರಿತು ಕಾಮಗಾರಿ ನಡೆಸದಂತೆ ಆಕ್ಷೇಪ ಪತ್ರ ನೀಡಿದ್ದರು ಪಂಚಾಯಿತಿ ಕಡೆಗಣಿಸಿದೆ.ಅವೈಜ್ಞಾನಿಕ ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷರು,ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. సిపిఎం ಬೈಂದೂರು ವಲಯ ಸಮಿತಿ ಸದಸ್ಯ ಸಂತೋಷ್ ಹೆಮ್ಮಾಡಿ, ನರಸಿಂಹ ದೇವಾಡಿಗ, ವಾಸುದೇವ, ಲಿಂಗಿ, ಸವಿತಾ, ಯಶೋದಾ, ಸೂರು, ಜಗದೀಶ್ ಆಚಾರ್, ಸಿಐಟಿಯು ಜಿಲ್ಲಾ ಮುಖಂಡ ಸುರೇಶ್ ಕಲ್ಲಾಗರ, ರೈತ ಸಂಘದ ಮುಖಂಡ ಚಂದ್ರಶೇಖರ ವಿ. ಮತ್ತಿತರರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ