ಅ.7 ರಂದು ಶ್ರೀಗುಹೇಶ್ವರ ದೇವಳದಲ್ಲಿ ಅಷ್ಟಮಂಗಲ ಪ್ರಶ್ನೆ

Share

Advertisement
Advertisement
Advertisement

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿರುವ ಶ್ರೀ ಗುಹೇಶ್ವರ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸವನ್ನುಳ್ಳ ದೇವಾಲಯಗಳಲ್ಲಿ ಒಂದಾಗಿದೆ.ಪಡುವಣ ಕಡಲಿನಿಂದ ಆರಂಭಗೊಂಡು ಸೌಪರ್ಣಿಕಾ ನದಿಯಿಂದ ಸುತ್ತುವರಿಯಲ್ಪಟ್ಟ ಗಂಗೊಳ್ಳಿ,ಗುಜ್ಜಾಡಿ,ತ್ರಾಸಿ ಮತ್ತು ಹೊಸಾಡು ಈ ನಾಲ್ಕು ಗ್ರಾಮಗಳ ಗ್ರಾಮದೇವರಾದ ಶ್ರೀ ಗುಹೇಶ್ವರ ಸನ್ನಿಧಾನದಲ್ಲಿ ಜೀರ್ಣೋದ್ಧಾರ ಅಂಗವಾಗಿ ಕೇರಳದ ಪ್ರಸಿದ್ಧ ದೈವಜ್ಞರಾದ ಶ್ರೀ ನಾರಾಯಣ ನಂಬೂದಿರಿ ಕೈಮುಕ್ಕು ಹಾಗೂ ಇತರ ದೈವಜ್ಞರ ಸಹಕಾರದೊಂದಿಗೆ ಅಷ್ಟಮಂಗಲ ಪ್ರಶ್ನೆಯು ಅ.7 ರಂದು ಶನಿವಾರ ದಿಂದ ಆರಂಭಗೊಂಡು ಅ.09 ರ ಸೋಮವಾರ ತನಕ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನ ಸಮಿತಿ ತಿಳಿಸಿದೆ.ಪ್ರಾಶ್ನ ಚಿಂತನಾ ಕಾರ್ಯದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page