ರಾಜ್ಯ ಮಟ್ಟದ ಕುಣಿತ ಭಜನೆ ಸ್ಪರ್ಧೆ,ಶ್ರೀರಾಧಾ ಕೃಷ್ಣ ಭಜನಾ ಮಂಡಳಿ ನೀರ್ಕೆರೆ ಪ್ರಥಮ





ಕುಂದಾಪುರ:ತಾಲೂಕಿನ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವ ಅಂಗವಾಗಿ ಆಯೋಜಿಸಿದ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ರಾಧಾ ಕೃಷ್ಣ ಭಜನಾ ಮಂಡಳಿ ನೀರ್ಕೆರೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.ಶ್ರೀ ರಾಮ ಯುವಕ ಮಂಡಲ ಬಟ್ಟೆಕುದ್ರು ದ್ವೀತಿಯ ಸ್ಥಾನ ಹಾಗೂ ಶ್ರೀ ಆಂಜನೇಯ ಭಜನಾ ಮಂಡಳಿ ಸಾಣೂರು ಕಾರ್ಕಳ ತೃತೀಯ ಸ್ಥಾನ,ಜೈ ಶ್ರೀರಾಮ ಭಜನಾ ಮಂಡಳಿ ಕಂಚಗೋಡು ನಾಲ್ಕನೇ ಸ್ಥಾನ,ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಪಾಡಿಗಾರ ಐದನೇ ಸ್ಥಾನವನ್ನು ಪಡೆದುಗೊಂಡಿದೆ.ಕುಣಿತಾ ಭಜನಾ ಸ್ಪರ್ಧೆಯಲ್ಲಿ ಜಯಗಳಿಸಿದ ತಂಡಗಳಿಗೆ ನಗದು ಪುರಸ್ಕಾರ ಮತ್ತು ಶಾಶ್ವತ ಫಲಕವನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭ ದೇವಸ್ಥಾನದ ಪದಾಧಿಕಾರಿಗಳು,ತೀರ್ಪುಗಾರರು ಉಪಸ್ಥಿತರಿದ್ದರು.



















































































































































































































































































































































































































































































































































































































































































































































































































































































































































































































































































































































































































































































































































































































































































