ಹೊಸಾಡು ಶಾಲೆಯಲ್ಲಿ ಎಲ್‍ಕೆಜಿ,ಯುಕೆಜಿ ತರಗತಿ ಶುಭಾರಂಭ


ಕುಂದಾಪುರ:ಬೈಂದೂರು ವಲಯದ ಹೊಸಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಎಲ್‍ಕೆಜಿ ಮತ್ತು ಯುಕೆಜಿ ತರಗತಿ ಶುಭಾರಂಭ ಕಾರ್ಯಕ್ರಮ ಅದ್ಧೂರಿಯಾಗಿ ಮಂಗಳವಾರ ನಡೆಯಿತು.
ಹೊಸಾಡು ಶಾಲೆ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಎಲ್‍ಕೆಜಿ ಮತ್ತು ಯುಕೆಜಿ ತರಗತಿ ಕೋಣೆಯನ್ನು ಉದ್ಘಾಟಿಸಿದರು.ಎಸ್‍ಡಿಎಂಸಿ ಅಧ್ಯಕ್ಷೆ ರೇಖಾಗಣೇಶ ಅಧ್ಯಕ್ಷತೆ ವಹಿಸಿದ್ದರು.ಬೈಂದೂರು ಬಿಒ ನಾಗೇಶ್ ನಾಯ್ಕ್,ನಿವೃತ್ತ ಮುಖ್ಯೋಪಾಧ್ಯಾಯರಾದ ಸದಾಶಿವ ಶೆಟ್ಟಿ,ಜ್ಯೋತಿ ಐತಾಳ್ ಮತ್ತು ತೇಜಪ್ಪ ಶೆಟ್ಟಿ,ನಿವೃತ್ತ ಶಿಕ್ಷಕರಾದ ಭಾಸ್ಕರ ಶೆಟ್ಟಿ,ಭಾಸ್ಕರ ಮಯ್ಯ,ಮಾಜಿ ಗ್ರಾ.ಪಂ ಅಧ್ಯಕ್ಷ ಚಂದ್ರ ಪೂಜಾರಿ ಅರಾಟೆ,ಎಂ.ಎಂ ಸುವರ್ಣ,ನಿವೃತ್ತ ಪಶು ವೈದ್ಯ ಡಾ.ರಾಘವೇಂದ್ರ ಶೆಟ್ಟಿ,ಪೆÇೀಷಕರು,ಶಿಕ್ಷಕವೃಂದವರು,ಹಳೆ ವಿದ್ಯಾರ್ಥಿಗಳು,ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಸ್ವಾಗತಿಸಿದರು.ಪ್ರೆÇೀ ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಪ್ರತಿಮಾ ನಿರೂಪಿಸಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ ಆಚಾರ್ಯ ವಂದಿಸಿದರು.ಸಾಂಪ್ರದಾಯಿಕ ಶೈಲಿಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಲಾಯಿತು.