ಶ್ರೀಗಣಪತಿ ದೇವಸ್ಥಾನ ಚಿತ್ತಾರಿ ಹೆಮ್ಮುಂಜೆ,ಶಿಲಾಮಯ ದೇಗುಲ ಲೋಕಾರ್ಪಣೆ ಪುನರ್ ಪ್ರತಿಷ್ಠೆ

Share

Advertisement
Advertisement
Advertisement

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮದ ಚಿತ್ತಾರಿ ಹೆಮ್ಮುಂಜೆಯಲ್ಲಿ,ಹೆಮ್ಮುಂಜೆ ಮನೆಯವರು ನೂತನವಾಗಿ ನಿರ್ಮಿಸಿರುವ ಇತಿಹಾಸ ಪ್ರಸಿದ್ಧ ಶ್ರೀಗಣಪತಿ ದೇವಸ್ಥಾನದ ಶಿಲಾಮಯ ದೇಗುಲ ಲೋಕಾರ್ಪಣೆ,ಶ್ರಿದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅರ್ಚಕರಾದ ಮಂಜುನಾಥ್ ಭಟ್ ನೇತೃತ್ವದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಹೆಮ್ಮುಂಜೆ ಚಿತ್ತಾರಿ ಶ್ರೀಗಣಪತಿ ದೇವರ ಪುನರ್ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ಶ್ರೀದೇವರಿಗೆ ಮಹಾಪೂಜೆ,ಮಂತ್ರಾಕ್ಷತೆ,ತೀರ್ಥಪ್ರಸಾದ ವಿತರಣೆ,ಅಲಂಕಾರ ಪೂಜೆಯನ್ನು ಸಲ್ಲಿಸಲಾಯಿತು.ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು,ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.
ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.ದೇಗುಲದ ಆವರಣದಲ್ಲಿ ವಿನಯ್ ರಾವ್ ತುಮಕೂರು ಅವರು ನಿರ್ಮಿಸಿರುವ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ನೋಡುಗರ ಮನ ಸೆಳೆಯಿತು.
ಅರ್ಚಕರಾದ ಸತನತ್ ಕುಮಾರ್ ಮಾತನಾಡಿ,ವಿಘ್ನ ನಿವಾರಕನಾದ ಗಣಪತಿ ದೇವರನ್ನು ಪ್ರಥಮ ಪೂಜಿತನೆಂದು ಆರಾಧಿಸುತ್ತೇವೆ.ಎಲ್ಲಾ ಕಾರ್ಯಗಳಿಗೂ ಗಣಪತಿ ದೇವರ ಆರಾಧನೆ ಎನ್ನುವುದು ಬಹಳಷ್ಟು ಪ್ರಮುಖವಾದದ್ದು.ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಹೆಮ್ಮುಂಜೆ ಚಿತ್ತಾರಿ ಗಣಪತಿ ದೇವರ ನೂತನ ದೇವಾಲಯವನ್ನು ನಾನಾ ಧಾರ್ಮಿಕ ವಿಧಿವಿಧಾನಗೊಂದಿಗೆ ಲೋಕಾರ್ಪಣೆ ಮಾಡುವುದರ ಜತೆಗೆ ಶ್ರೀದೇವರ ಪುನರ್ ಪ್ರತಿಷ್ಠೆ ಕಾರ್ಯವೂ ನಿರ್ವಿಘ್ನವಾಗಿ ಸಮಾಪನಗೊಂಡಿದೆ.ಭವಗವಂತನು ಎಲ್ಲರನ್ನು ಕರುಣಿಸಲಿ ಎಂದರು.

ಕ್ಷೇತ್ರದ ಭಕ್ತರಾದ ಕನಕ ಗ್ರೂಪ್ ಜಗದೀಶ ಶೆಟ್ಟಿ ಮಾತನಾಡಿ,ಬಹಳಷ್ಟು ಇತಿಹಾಸವನ್ನು ಹೊಂದಿರುವ ಶ್ರೀಗಣಪತಿ ದೇವರ ಪುನರ್ ಪ್ರತಿಷ್ಠೆ ಹಾಗೂ ನೂತನ ದೇವಾಲಯದ ನಿರ್ಮಾಣದ ಕಾರ್ಯ ಅಚ್ಚುಕಟ್ಟಾಗಿ ನಡೆದಿರುವುದು ಎಲ್ಲರಿಗೂ ಸಂತೋಷವನ್ನು ಉಂಟು ಮಾಡಿದೆ.ದೇವಾಲಯದ ಕಾರ್ಯದಲ್ಲಿ ತೊಡಗಿ ಕೊಂಡಿರುವ ಎಲ್ಲರಿಗೂ ಗಣಪತಿ ದೇವರು ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.
ಹೆಮ್ಮುಂಜೆ ಮನೆತನದವರಾದ ಸಂತೋಷ ಕುಮಾರ್ ಶೆಟ್ಟಿ ಮಾತನಾಡಿ,300 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ದೇವಾಲಯವೂ ಸಂಪೂರ್ಣವಾಗಿ ಅಜೀರ್ಣ ಅವಸ್ಥೆಯಲ್ಲಿ ಇದ್ದಿದೆ.ಪ್ರಶ್ನಾ ಚಿಂತನಾ ಕಾರ್ಯದ ಮೂಲಕ ದೇವಾಲಯವನ್ನು ಅಭಿವೃದ್ಧಿಗೊಳಿಸಲಾಗಿದೆ.ಇವೊಂದು ಸತ್ಕಾರ್ಯದಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಗನಪತಿ ದೇವರು ಅವರ ಇಷ್ಟಾರ್ಥವನ್ನು ಸಿದ್ಧಿಸುವಂತೆ ಕರುಣಿಸಲಿ ಎಂದು ಬೇಡಿಕೊಂಡರು.
ಈ ಸಂದರ್ಭದಲ್ಲಿ ದೇವಸ್ಥಾನದ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷರು,ಸದಸ್ಯರು,ಸಿಬ್ಬಂದಿ ವರ್ಗ,ಹೆಮ್ಮಂಜೆ ಮನೆಯವರು,ಗ್ರಾಮಸ್ಥರು,ಅರ್ಚಕರು ಉಪಸ್ಥಿತರಿದ್ದರು.

ವರದಿ:ಜಗದೀಶ ದೇವಾಡಿಗ
ನಮ್ಮ ಜಾಲತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ- 9916284048

Advertisement


Share

Leave a comment

Your email address will not be published. Required fields are marked *

You cannot copy content of this page