ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಶ್ರೀನಾಗಾನುಗ್ರಹ ಪ್ರಶಸ್ತಿ ಪ್ರದಾನ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಶ್ರೀ ಸುಬ್ರಹ್ಮಣ್ಯ,ಶ್ರೀ ವಿದ್ಯಾಗಣಪತಿ,ಶ್ರೀ ನವಗ್ರಹ ದೇವಸ್ಥಾನದಲ್ಲಿ 9ನೇ ವರ್ಷದ ನಾಗರ ಪಂಚಮಿ ಹಬ್ಬ ಮತ್ತು ಶ್ರೀ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನದೊಂದಿಗೆ ಶುಕ್ರವಾರ ನಡೆಯಿತು.
ವಾಸ್ತು ತಜ್ಞ,ಯಕ್ಷಗಾನ ಪ್ರಸಂಗ ಕರ್ತರಾದ ಜ್ಯೋತಿಷಿ ಡಾ.ಬಸವರಾಜ್ ಶೆಟ್ಟಿಗಾರ್ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಪ್ಪುಂದ ರಾಘವೇಂದ್ರಸ್ವಾಮಿ ಮಠದ ವಿಚಾರಣಾಕರ್ತ ಸುಭಾಶ್ಚಂದ್ರ ಪುರಾಣಿಕ ಉದ್ಘಾಟಿಸಿದರು.ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಶುಭಾಂಶನೆಗೈದರು.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ರಾಜು ಪೂಜಾರಿ,ಎಸ್ ಮದನ್ ಕುಮಾರ್ ಉಪ್ಪುಂದ,ರಂಗೋಲಿ ಕಲಾವಿದೆ ಡಾ.ಭಾರತಿ ಮರವಂತೆ ಉಪಸ್ಥಿತರಿದ್ದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಶ್ರೀ ನಾಗಾನುಗ್ರಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಸಿ.ಎಸ್. ಖಾರ್ವಿ ಕೊಡೇರಿ ಸ್ವಾಗತಿಸಿದರು. ದೇವಸ್ಥಾನದ ಧರ್ಮದರ್ಶಿ ತಿಮ್ಮ.ವಿ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರುಗೋವಿಂದ ಎಮ್ ಮಟ್ನಕಟ್ಟೆ ನಿರೂಪಿಸಿದರು.ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ದೇವರಾಜ್ ಮರವಂತೆ ಭಾಗವತ ಬಳಗದ ವತಿಯಿಂದ ವಾಲಿಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು.