ನಾಡ:ಅಭಿಲಾಷ ಜ್ಯುವೆಲ್ಲರಿ ವರ್ಕ್ ಶಾಪ್ ಉದ್ಘಾಟನೆ

ಕುಂದಾಪುರ:ನಾಡ ಗುಡ್ಡೆಯಂಗಡಿ ಎಸ್ ಪಿ ಪಾರ್ಕ್ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಶುಭಾರಂಭ ಗೊಂಡಿರುವ ಗುರುರಾಜ್ ಆಚಾರ್ಯ ಮಾಲೀಕತ್ವದ ಅಭಿಲಾಷ ಜ್ಯುವೆಲ್ಲರಿ ವರ್ಕ್ ಶಾಪ್ ಉದ್ಘಾಟನಾ ಕಾರ್ಯಕ್ರಮ ನಾನಾ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಮಂಗಳವಾರ ನಡೆಯಿತು.
ಅಭಿಲಾಷ ಜ್ಯುವೆಲ್ಲರಿ ವರ್ಕ್ ಶಾಪ್ ಮಾಲೀಕರಾದ ಗುರುರಾಜ್ ಆಚಾರ್ಯ ಮಾತನಾಡಿ,ನಾಡ ಗಡ್ಡೆಯಂಗಡಿಯಲ್ಲಿ ಕಳೆದ ಎಂಟು ವರ್ಷಗಳಿಂದ ಅಭಿಲಾಷ ಜ್ಯುವೆಲ್ಲರಿ ವರ್ಕ್ ಶಾಪ್ ನಡೆಸಿಕೊಂಡು ಬರಲಾಗುತ್ತಿದೆ,ಇದೀಗ ಹೊಸ ವಿನ್ಯಾಸದೊಂದಿಗೆ ಎಸ್ ಪಿ ಪಾರ್ಕ್ ನಲ್ಲಿ ನೂತನ ಜುವೆಲರಿ ಶಾಪ್ ಆರಂಭಿಸಲಾಗಿದ್ದು ಗ್ರಾಹಕರು ಪ್ರೋತ್ಸಾಹಿಸಬೇಕೆಂದು ಕೇಳಿ ಕೊಂಡರು.ಗ್ರಾಹಕರಿಗೆ ಉತ್ತಮ ಸೇವೆಯನ್ನು ಸದಾ ನೀಡಲಾಗುವುದು ಎಂದು ಹೇಳಿದರು.
ಕಟ್ಟಡ ಮಾಲೀಕರಾದ ವಿಜಯ ಕುಮಾರ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.ಸತೀಶ್ ಎಂ ನಾಯಕ್ , ಶರತ್ ಕುಮಾರ್ ಶೆಟ್ಟಿ, ರುಕ್ಮಿಣಿ ಆಚಾರ್ಯ, ಚೈತ್ರಾ ಆಚಾರ್ಯ,ಗುರುರಾಜ್ ಆಚಾರ್ಯ,ರವಿರಾಜ್ ಆಚಾರ್ಯ, ಶಾಲಿನಿ, ಸುಬ್ರಹ್ಮಣ್ಯ ಆಚಾರ್ಯ, ಉಷಾ,ಆಶಾ ಜಗದೀಶ್ ಆಚಾರ್ಯ,ಜಗದೀಶ್ ಆಚಾರ್ಯ,ಸುಮತಿ ಆಚಾರ್ಯ,ರಾಮ ಆಚಾರ್ಯ ಉಪಸ್ಥಿತರಿದ್ದರು.