ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು,ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ,ಚಂಡಿಕಾಹೋಮ ಸಮರ್ಪಣೆ

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ತಲ್ಲೂರು ಗ್ರಾಮದ ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ಕನ್ಯಾನ ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ನವರಾತ್ರಿ ಉತ್ಸವದ ಒಂಭತ್ತನೇ ದಿನದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ,ಸುಹಾಸಿನಿ ಪೂಜೆ,ಮಹಾಪೂಜೆ,ಅನ್ನಸಂತರ್ಪಣೆ,ಭಜನಾ ಕಾರ್ಯಕ್ರಮ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ನಡೆಯಿತು.ನೂರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ಗಂಧಪ್ರಸಾದ ಸ್ವೀಕರಿಸಿದರು.


ಅರ್ಚಕರಾದ ಗುರುರಾಜ ಸೋಮಯಾಜಿ ಮಾತನಾಡಿ,ಕೂಡ್ಲು ಬಾಡಬೆಟ್ಟು ಎನ್ನುವ ಕ್ಷೇತ್ರ ಬಹಳಷ್ಟು ಕಾರಣಿಕವನ್ನು ಹೊಂದಿರುವ ಕ್ಷೇತ್ರವಾಗಿದೆ.ಪ್ರಥಮವಾಗಿ ಶನೀಶ್ವರ ದೇವರನ್ನು ಪೂಜಿಸಿಕೊಂಡು ಬರಲಾಗುತ್ತಿದ್ದು ಪ್ರಶ್ನಾ ಚಿಂತನಾದಲ್ಲಿ ತಿಳಿದು ಬಂದಂತೆ ಚೌಡೇಶ್ವರಿ ಸೇರಿದಂತೆ ಇನ್ನಿತರ ದೇವರನ್ನು ಪ್ರತಿಷ್ಠಾಪಿಸಿಕೊಂಡು ಪೂಜಿಸಿಕೊಂಡು ಬರಲಾಗುತ್ತಿದೆ.ಕಾಲ ಕಾಲದಲ್ಲಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಕೊಂಡು ಬರಲಾಗುತ್ತಿದ್ದು.ಕ್ಷೇತ್ರಕ್ಕೆ ಬಂದು ಬೇಡಿಕೊಂಡು ಬಂದಂತಹ ಭಕ್ತಾದಿಗಳ ಇಷ್ಟಾರ್ಥ ಸಿದ್ದಿಗಳನ್ನು ಈಡೇರಿಸುವಂತ ಮಹಿಮೆ ಕ್ಷೇತ್ರದ್ದು ಆಗಿರುತ್ತದೆ.ಮಕ್ಕಳಿಲ್ಲದವರು ಸಂತಾನಕ್ಕಾಗಿ ಕ್ಷೇತ್ರಕ್ಕೆ ಬಂದು ನಾಗರ ದೇವರಲ್ಲಿ ಬೇಡಿಕೊಂಡು ಹರಕೆ ಸಲ್ಲಿಕೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ.ಎಷ್ಟೋ ಜನರಿಗೆ ಮಕ್ಕಳಾದಂತಹ ನಿದರ್ಶನ,ರೋಗ ಋಜಿನಗಳು ನಾಶವಾದಂತಹ ಉದಾಹರಣೆಗಳು ಬಳಷ್ಟು ಇದೆ.ಶತ್ರು ನಾಶಕ್ಕಾಗಿ,ವ್ಯವಹಾರದ ಅಭಿವೃದ್ಧಿಗಾಗಿ ಸದ್ಭಾವನೆಯಿಂದ ಯಾರೋ ಪ್ರಾರ್ಥನೆಯನ್ನು ಸಲ್ಲಿಸುತ್ತಾರೋ ಅವರಿಗೆ ಒಳಿತಾಗಲಿದೆ.ದೇವಸ್ಥಾನದ ಧರ್ಮದರ್ಶಿಗಳಾದ ಜಯರಾಮ ಅವರು ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಅವರ ಅನುಗ್ರಹ ನುಡಿಯಿಂದ ಜನರಿಗೆ ಒಳಿತಾಗಲಿ ಎಂದು ಹೇಳಿದರು.

ದಿನಕರ ಉಡುಪ ಹರವರಿ ಮಾತನಾಡಿ,
ಶನೀಶ್ವರ ದೇವಸ್ಥಾನದ ಸಾನಿಧ್ಯದಲ್ಲಿರುವ ಚೌಡೇಶ್ವರಿ ದೇವರಿಗೆ ಪ್ರತಿ ವರ್ಷವೂ ಸಹ ನವರಾತ್ರಿ ಉತ್ಸವವನ್ನು ವಿಶೇಷವಾದ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.ನವಮಿ ದಿನದಂದು ಚಂಡಿಕಾ ಹೋಮವನ್ನು ದೇವರಿಗೆ ಸಮರ್ಪಣೆಯನ್ನು ಸಂಪ್ರದಾಯದಂತೆ ಮಾಡಲಾಗಿದೆ.ನವರಾತ್ರಿ ಹಬ್ಬ ಎನ್ನುವುದು ಹಿಂದೂಗಳಿಗೆ ಪವಿತ್ರವಾದಂತಹ ಮಾಸವಾಗಿದೆ ಎಂದರು.


ರಥ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾದ ಜಗದೀಶ್ ಆಚಾರ್ಯ ಅವರು ಮಾತನಾಡಿ,ಶನೀಶ್ವರ ಮತ್ತು ಚೌಡೇಶ್ವರಿ ದೇವಿ ಮತ್ತು ಪರಿವಾರ ದೇವರುಗಳ ಮಹಿಮೆ ಅಪಾರವಾದದು.ಸಾಮಾನ್ಯವಾಗಿ ತಿಳಿದಿರುವಂತೆ ಶನೀಶ್ವರ ದೇವಾಲಯದಲ್ಲಿ ರಥ ನಿರ್ಮಾಣವಾಗಿರುವುದು ಈ ಮೊದಲೆ ಎನ್ನಬಹುದು.ಕ್ಷೇತ್ರದಲ್ಲಿ ಆಗುವ ಅಭಿವೃದ್ಧಿ ಕಾರ್ಯಗಳಿಗೆ ಭಕ್ತರು,ದಾನಿಗಳು ಸಹಕಾರ ನೀಡಬೇಕೆಂದು ಕೇಳಿಕೊಂಡರು.


ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಶ್ರೀಲಹರಿ ದೇವಾಡಿಗ ಅವರನ್ನು
ದೇವಸ್ಥಾನದ ಧರ್ಮದರ್ಶಿಗಳು ಪಾತ್ರಿಗಳಾದ ಜಯರಾಮ ಅವರು ದೇವಸ್ಥಾನದ ವತಿಯಿಂದ ಗೌರವಿಸಿದರು.
ಈ ಸಂದರ್ಭ ರಾಜು ಸೌಕೂರು, ಅರ್ಚಕರು,ಸಮಿತಿ ಸದಸ್ಯರು,ಮತ್ತಿತರರು ಉಪಸ್ಥಿತರಿದ್ದರು.

ದೇವಸ್ಥಾನದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ದೇಣಿಗೆ ನೀಡಬಯಸುವವರು ಈ ಖಾತೆಗೆ ಹಣವನ್ನು ಕಳುಹಿಸಬಹುದು.
ಖಾತೆ ಹೆಸರು-ಜೀರ್ಣೋದ್ಧಾರ ಸಮಿತಿ
ಖಾತೆ ಸಂಖ್ಯೆ-0650101016655
ಬ್ರಾಂಚ್-ನೆರಳಕಟ್ಟೆ
ಐಎಫ್‍ಎಸ್‍ಸಿ ಕೋಡ್-ಸಿಎನ್‍ಆರ್‍ಬಿ0000650
ಬ್ಯಾಂಕ್-ಕೆನರಾ ಬ್ಯಾಂಕ್

Advertisement


Share

Leave a comment

Your email address will not be published. Required fields are marked *

You cannot copy content of this page