ಸೇತುವೆ ಸುರಕ್ಷ ಗಾರ್ಡ್ ಗೆ ಡಿಕ್ಕಿ ಹೊಡೆದ ಬಸ್ ಪ್ರಯಾಣಿಕರು ಪಾರು


ಉಡುಪಿ:ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಚಲಿಸುತ್ತಿದ್ದ ಬಸ್ಸೊಂದು ಸ್ವರ್ಣ ನದಿ ಕಲ್ಯಾಣ್ಪುರ ಸೇತುವೆಯ ಗಾರ್ಡ್ ಗೆ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ಸೇತುವೆ ಗಾರ್ಡ್ ಮುರಿದು ನದಿಗೆ ಬಿದ್ದಿದೆ.ನದಿಗೆ ಉರುಳಿ ಬೀಳುವ ಪರಿಸ್ಥಿತಿಯಲ್ಲಿದ್ದ ಬಸ್ ಅಪಾಯದಿಂದ ಪಾರಾಗಿದೆ.ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಅದೆ ಸಮಯದಲ್ಲಿ ಸೇತುವೆ ಕೆಳಗಡೆ ದೋಣಿಯಲ್ಲಿ ಮೀನುಗಾರಿಕೆ ಮಾಡುತಿದ್ದ ಶಂಕರ ಎನ್ನುವವರ ಮೇಲೆ ಸಿಮೆಂಟು ಕಂಬದ ತುಂಡ್ಡು ಮುರಿದು ಬಿದ್ದು ಕೈಗೆ ಹೊಡೆತ ಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಕಲ್ಯಾಣಪುರ ಸೇತುವೆ 1963 ರಲ್ಲಿ ನಿರ್ಮಾಣವಾಗಿದ್ದು 6 ದಶಗಳಷ್ಟು ಹಳೆಯದಾಗಿದೆ. ಬಹಳಷ್ಟು ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿದ್ದು ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ.ಸೇತುವೆ ಅಡಿ ಭಾಗದಲ್ಲಿ ಅಲ್ಲಲ್ಲಿ ಕಾಂಕ್ರೇಟ್ ಬಿರುಕು ಬಿಟ್ಟಿದ್ದು ಸೇತುವೆಯನ್ನು ದುರುಸ್ಥಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.