ಶಂಕರನಾರಾಯಣ:ಸುಂಟರಗಾಳಿ ಅಬ್ಬರ ಧರೆಗೆ ಉರುಳಿದ ಅಡಿಕೆ ಮರ,ಲಕ್ಷಾಂತರ.ರೂ ನಷ್ಟ
ಕುಂದಾಪುರ:ತಾಲೂಕಿನ ಅಮಾಸೆಬೈಲ್ ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳ್ಳಂಜೆ ಹೆಗೊಡ್ಡು ರಟ್ಟಾಡಿ ನಡಂಬೂರು ಜನತಾ ಕಾಲೋನಿ ಮುಂತಾದ ಭಾಗದಲ್ಲಿ ಬುಧುವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಬೀಸಿದ ಸುಂಟರಗಾಳಿ ಅಬ್ಬರಕ್ಕೆ ಊರಿಗೆ ಊರೇ ಬೆಚ್ಚಿ ಬಿದ್ದಿದ್ದು ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ,ಸಾವಿರಾರು ಅಡಿಕೆ ಹಾಗೂ ಇನ್ನಿತ್ಯಾದಿ ಬೃಹತಾಕಾರದ ಮರಗಳು ಧರೆಗುರುಳಿದ್ದು ಲಕ್ಷಾಂತರ.ರೂ ನಷ್ಟವಾಗಿದೆ.ಕುಳ್ಳಂಜೆ ಹೆಗೊಡ್ಡು ಸುಬ್ಬ ನಾಯ್ಕ ಹಾಗೂ ಧರ್ಮರಾಜ ನಾಯ್ಕ ಎಂಬವರ ಮನೆಯ ಸಾವಿರಕ್ಕೂ ಮಿಕ್ಕಿ ಅಡಕೆ ಮರಗಳು ಸಂಪೂರ್ಣವಾಗಿ ಗಾಳಿಯ ಅಬ್ಬರಕ್ಕೆ ತುಂಡಾಗಿ ನೆಲಕ್ಕುರುಳಿವೆ […]