ವಿದ್ಯಾರ್ಥಿವೇತನಾ,ಪ್ರತಿಭಾ ಪುರಸ್ಕಾರ,ಪುಸ್ತಕ ವಿತರಣೆ

ಕುಂದಾಪುರ:ರಾಮಕ್ಷತ್ರಿಯ ಸಂಘ ಗಂಗೊಳ್ಳಿ ವತಿಯಿಂದ ವಿದ್ಯಾರ್ಥಿ ವೇತನಾ,ಪ್ರತಿಭಾ ಪುರಸ್ಕಾರ ಮತ್ತು ಕೊಡೆ,ಪುಸ್ತಕ ವಿತರಣೆ ಕಾರ್ಯಕ್ರಮ ಶ್ರೀ ಸೀತಾರಾಮಚಂದ್ರ ಸಭಾಭವನ ಗಂಗೊಳ್ಳಿಯಲ್ಲಿ ನಡೆಯಿತು.ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರಾಜೇಶ್ ಎಮ್.ಜಿ ಅಧ್ಯಕ್ಷತೆ ವಹಿಸಿದ್ದರು.ಯುವಕ ಮಂಡಳ ಅಧ್ಯಕ್ಷ ರಾಜೇಂದ್ರ ಬಾಳಯ್ಯನ ಮನೆ,ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ರಾಮಚಂದ್ರ ಹಾಗೂ ರಾಮಕ್ಷತ್ರೀಯ ಸಂಘದ ಉಪಾಧ್ಯಕ್ಷ ಗಂಗಾಧರ ಉಗ್ರಾಣಿ ಮತ್ತು ವಾಸುದೇವ ನಡುಮನೆ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಉಗ್ರಾಣಿ,ದಿನೇಶ ಉಗ್ರಾಣಿ,ಶ್ರೀಧರ ಹೊಸ್ಮನೆ,ನಾಗೇಶ್ ಅಪ್ಪಯ್ಯನ ಮನೆ,ರಾಧಾಕೃಷ್ಣ ಕೊಡಪಾಡಿ,ಕಾರ್ಯದರ್ಶಿ ಶ್ರೀಧರ ಎನ್ ಸಕ್ಲಾತಿ,ಸುರೇಶ ನಡುಮನೆ ಉಪಸ್ಥಿತರಿದ್ದರು.ಅಪ್ಪಯ್ಯನ ಮನೆ ಮಂಜುನಾಥ […]

ಭಾರಿ ಮಳೆಗೆ ಮನೆ ಗೋಡೆ ಕುಸಿತ:5 ಲಕ್ಷ.ರೂ ನಷ್ಟ

ಕುಂದಾಪುರ:ನಿರಂತರವಾಗಿ ಸುರಿದ ಭಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮುಂಜೆ ನರಸಿಂಹ ಆಚಾರ್ಯ ಅವರ ಮನೆ ಗೋಡೆ ಕುಸಿತ ಗೊಂಡು ಭಾಗಶಹ ಹಾನಿ ಉಂಟಾಗಿದೆ.ಅಂದಾಜು 5.ಲಕ್ಷ.ರೂ ನಷ್ಟ ಸಂಭವಿಸಿದ ಘಟನೆ ಬುಧವಾರ ನಡೆದಿದೆ.ಕರಾವಳಿ ಭಾಗದಲ್ಲಿ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಧಾರಕಾರ ಮಳೆ ಗಾಳಿ ಅಬ್ಬರಕ್ಕೆ ಮನೆಗಳ ಮೇಲೆ ಮರ ಬಿದ್ದು ಹಾನಿ ಆಗಿದ್ದು ಮಾತ್ರವಲ್ಲದೆ.ಮನೆಗಳ ಗೋಡೆ ಕುಸಿತಗೊಂಡಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ನದಿಗೆ ಹಾರಿ ವ್ಯಕ್ತಿ ನಾಪತ್ತೆ

ಕುಂದಾಪುರ:ಸುರಿಯುತ್ತಿದ್ದ ಮಳೆ ನಡುವೆ ಮಧ್ಯಾಹ್ನ ಸುಮಾರು 12.45 ರ ಸುಮಾರಿಗೆ ಕುಂದಾಪುರದ ಕಾಳಾವರ ಮೂಲದ ಹರೀಶ್ (40) ಎನ್ನುವ ವ್ಯಕ್ತಿಯು ಕಂಡ್ಲೂರು ಸೇತುವೆ ಯಿಂದ ನದಿಗೆ ಹಾರಿ ನಾಪತ್ತೆ ಆಗಿದ್ದಾರೆ.ಭಾರಿ ಮಳೆ ಹಾಗೂ ಪ್ರವಾಹದ ಕಾರಣದಿಂದ ಅವರ ಪತ್ತೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ.ವ್ಯಕ್ತಿ ಗುರುತು ಪತ್ತೆ ಆದಲ್ಲಿ ಹತ್ತಿರದ ಪೊಲೀಸ್ ಠಾಣೆ ಮತ್ತು ಈ ಕೆಳಗಿನ ವ್ಯಕ್ತಿಗಳನ್ನು ಸಂಪರ್ಕಿಸಬಹುದು. ದಿನೇಶ್ ಖಾರ್ವಿ :- 8618513248ವೆಂಕಟೇಶ್ ಖಾರ್ವಿ:- 9448462781ಸಚಿನ್ ಖಾರ್ವಿ :- 8197991084 ಬ್ರಾಹಿಂ ಗಂಗೊಳ್ಳಿ 98800 16816

You cannot copy content of this page