ಕುರು ದ್ವೀಪ ಪ್ರದೇಶ ಆವರಿಸಿದ ನೆರೆ

ಬೈಂದೂರು:ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಉಕ್ಕಿ ಹರಿದ ಪರಿಣಾಮ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರು ದ್ವೀಪದಲ್ಲಿ ಮಂಗಳವಾರ ಮತ್ತೆ ನೆರೆ ಕಾಣಿಸಿಕೊಂಡಿದ್ದು.ಕೆಂಪು ಓಕುಳಿ ನೆರೆ ನೀರು ಕುರು ದ್ವೀಪ ಪ್ರದೇಶವನ್ನು ಆವರಿಸಿದೆ.ಕಳೆದ ಒಂದು ವಾರಗಳ ಹಿಂದೆ ಕಾಣಿಸಿ ಕೊಂಡಿದ್ದ ನೆರೆ ಸೋಮವಾರ ಸುರಿದ ಭಾರಿ ಮಳೆಗೆ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದ್ದರಿಂದ ಮಂಗಳವಾರ ಎರಡನೇ ಬಾರಿಗೆ ನೆರೆ ನೀರು ಕುರು ದ್ವೀಪ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ.ನದಿಯಲ್ಲಿ […]

ಹೊಸಾಡು:ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿ

ಕುಂದಾಪುರ:ಮಂಗಳವಾರ ಸುರಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಾಳುಮನೆ ಕಾಳಮ್ಮ ಎಂಬುವವರ ಮನೆ ಮಾಡಿನ ಮೇಲೆ ಅಡಿಕೆ ಮರ ಬಿದ್ದು ಸಿಮೆಂಟ್ ಸೀಟ್,ಪಕಾಸಿ,ಹೆಂಚು,ಡಿಟಿಎಚ್ ತುಂಡಾಗಿದೆ.ಘಟನೆಯಲಿ ಅಂದಾಜು 15 ಸಾವಿರ.ರೂ ನಷ್ಟ ಉಂಟಾಗಿದೆ.ಹೊಸಾಡು ವಿ.ಎ ಮತ್ತು ಉಗ್ರಾಣಿ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಸೌಪರ್ಣಿಕಾ ನದಿ ತೀರ ಜಲಾವೃತ,ಸಂತೃಸ್ಥರ ಗೋಳು ಕೇಳುವವರೆ ಇಲ್ಲಾ

ಕುಂದಾಪುರ;ಕಳದೆರಡು ದಿನಗಳಿಂದ ಎಡಬಿಡದೆ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಉಕ್ಕಿ ಹರಿದ ಪರಿಣಾಮ ನಾವುಂದ ಸಾಲ್ಬುಡ,ಬಡಾಕೆರೆ,ಮರವಂತೆ,ಕುರು ದ್ವೀಪ,ಪಡುಕೋಣೆ ಭಾಗದಲ್ಲಿ ರಾತ್ರೋರಾತ್ರಿ ನೆರೆ ನೀರು ಮನೆ ಬಾಗಿಲಿಗೆ ನುಗ್ಗಿದ್ದು ಅವಾಂತರ ಸೃಷ್ಟಿ ಉಂಟು ಮಾಡಿದೆ.ನೆರೆ ನೀರು ಮನೆ ಬಾಗಿಲಿಗೆ ನುಗ್ಗಿದ ಪರಿಣಾಮ ನೂರಾರು ಕುಟುಂಬಗಳು ತೊಂದರೆಗೆ ಸಿಲುಕಿ ಕೊಂಡಿದ್ದಾರೆ.ಒಂದು ವಾರದ ಹಿಂದೆ ನೆರೆ ಯಿಂದ ಸಂಕಷ್ಟವನ್ನು ಅನುಭವಿಸಿದ ನೆರೆ ಪೀಡಿತ ಪ್ರದೇಶದ ಜನರು ಮಂಗಳವಾರ ಮತ್ತೆ ಕಾಣಿಸಿಕೊಂಡಿದ್ದ ನೆರೆ ನೀರಿ ನಿಂದ ತೊಂದರೆ ಪಡುವಂತಾಯಿತು.ನಾವುಂದ ಸಾಲ್ಬುಡ ಪ್ರದೇಶಕ್ಕೆ […]

You cannot copy content of this page