ಅಧ್ಯಕ್ಷರಾಗಿ ದಾಸ ಖಾರ್ವಿ ಆಯ್ಕೆ

ಕುಂದಾಪುರ:ಮಂಜುಶ್ರೀ ಫ್ರೆಂಡ್ಸ್ ಭಗತ್ ನಗರ ಕಂಚುಗೋಡು ಅದರ 2024-25 ರ ಸಾಲಿನ ಅಧ್ಯಕ್ಷರಾಗಿ ದಾಸ ಖಾರ್ವಿ ಹಾಗೂ ಗೌರವಾಧ್ಯಕ್ಷರಾಗಿ ವಿನೋದ್.ಜಿ ಖಾರ್ವಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನಾಗರಾಜ.ಎಲ್ ಖಾರ್ವಿ,ಕಾರ್ಯದರ್ಶಿ ಶಿವ.ಬಿ ಖಾರ್ವಿ,ಕೋಶಾಧಿಕಾರಿಯಾಗಿ ಶಿವರಾಜ್.ವಿ ಖಾರ್ವಿ ಅವರು ಆಯ್ಕೆಯಾದರು.

ಸುವರ್ಣ ಸಂಭ್ರಮ,ಸೀತಾರಾಮ ಕಲ್ಯಾಣೋತ್ಸವ ಪೂರ್ವಭಾವಿ ಸಭೆ

ಕುಂದಾಪುರ:ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಸಂಭ್ರಮ ಹಾಗೂ ಸೀತಾರಾಮ ಕಲ್ಯಾಣೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ಮಂಗಳವಾರ ನಡೆಯಿತು.ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಕುರಿತು ವೇ.ಮೂರ್ತಿ ಚೆನ್ನಕೇಶವ ಗಾಯಿತ್ರಿ ಭಟ್ ಆನಗಳ್ಳಿ ಅವರ ನೇತೃತ್ವದಲ್ಲಿ ಜಾಗದ ಪರಿಶೀಲನೆ ಮಾಡಲಾಯಿತು.ಶ್ರೀರಾಮ ತಾರಕ ಜಪಾ ಹೋಮ ಮಾಡುವುದರ ಕುರಿತು ಹೋಮದ ಕುಂಡವನ್ನು ಅರ್ಚಕರ ಉಪಸ್ಥಿತಿಯಲ್ಲಿ ರಚಿಸಲಾಯಿತು.ಮಹಿಳಾ ಸಮಿತಿ ಯಿಂದ ಸಭೆ ಜರುಗಿತು.ವೇ.ಮೂರ್ತಿ ಚೆನ್ನಕೇಶವ ಗಾಯಿತ್ರಿ ಭಟ್ ಆನಗಳ್ಳಿ ಅವರು ಧಾರ್ಮಿಕ ಸೂಚನೆಗಳನ್ನು ವಿವರಿಸಿ ಮಾತನಾಡಿ,ದೇವರ ಪೂಜೆ ಮಾಡುವುದರಿಂದ ಮನಸ್ಸು […]

ಶ್ರೀಲಕ್ಷ್ಮೀ ಜನಾರ್ಧನ ದೇವರಿಗೆ ಕರ್ಪೂರ ಸೇವೆ ಸಮರ್ಪಣೆ

ಕುಂದಾಪುರ:ಬೈಂದೂರು ತಾಲೂಕಿನ ಬಡಾಕೆರೆ ಶ್ರೀಲಕ್ಷ್ಮೀ ಜರ್ನಾಧನ ದೇವರ ರಥೋತ್ಸವ ಅಂಗವಾಗಿ ಓಕುಳಿ ಉತ್ಸವ ಹಾಗೂ ಶ್ರೀದೇವರ ಕರ್ಪೂರ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.ಶ್ರೀಲಕ್ಷ್ಮೀ ಜನಾರ್ಧನ ದೇವರ ಸನ್ನಿಧಾನದಲ್ಲಿ ವಾರ್ಷಿಕವಾಗಿ ನಡೆಯುವ ಕರ್ಪೂರ ಸೇವೆ ಕಾರ್ಯಕ್ರಮದಲ್ಲಿ ಭಕ್ತರು ಭಾಗಿ ತಮ್ಮ ಹರಕೆಯನ್ನು ಸಲ್ಲಿಸಿದರು.ಕರ್ನಾಟಕ ರಾಜ್ಯದಲ್ಲೆ ಅತಿ ಹೆಚ್ಚು ಕರ್ಪೂರ ಸೇವೆ ಬಡಾಕೆರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ನಡೆಯುತ್ತದೆ.

You cannot copy content of this page