ಮರವಂತೆ ಶಾಖೆ ಬ್ಯಾಂಕ್ ಮ್ಯಾನೇಜರ್ ರಾಹುಲ್ ಬಾಲಕೃಷ್ಣಗೆ ಶೃದ್ಧಾಂಜಲಿ ಸಲ್ಲಿಕೆ
ಕುಂದಾಪುರ:ಬ್ಯಾಂಕ್‍ನಿಂದ ಗ್ರಾಹರಿಗೆ ಸಿಗಬೇಕಾದಂತಹ ಸೌಲಭ್ಯಗಳನ್ನು ಯಾವುದೇ ರೀತಿ ಮುಚ್ಚು ಮರೆ ಇಲ್ಲದೆ ತುಂಬು ಉತ್ಸುಕತೆಯಿಂದ ನೀಡುವುದರ ಮೂಲಕ ನಿಯಮಗಳನ್ನು ಸಡಿಲಿಕೆ ಮಾಡಿಕೊಂಡು ಉತ್ತಮವಾದ ಸೇವೆಯನ್ನು ಜನರಿಗೆ ನೀಡುತ್ತಿದ್ದ ಮರವಂತೆ ಕೆನರಾ ಬ್ಯಾಂಕ್ ಶಾಖೆ ಮ್ಯಾನೇಜರ್ ರಾಹುಲ್ ಬಾಲಕೃಷ್ಣ ಅವರ ಅಕಾಲಿಕ ಸಾವು ಮರವಂತೆ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಪತ್ರಕರ್ತರಾದ ಎಸ್.ಜನಾರ್ದನ ಮರವಂತೆ ಹೇಳಿದರು.ಕೆನರಾ ಬ್ಯಾಂಕ್ ಮರವಂತೆ ಶಾಖೆಯಲ್ಲಿ ಸೋಮವಾರ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅಕಾಲಿಕವಾಗಿ ನಿಧನರಾದ ಮುಂಬಯಿ ಮೂಲದ ನಿವಾಸಿ ರಾಹುಲ್ ಬಾಲಕೃಷ್ಣ ಅವರ […]





























































































































































































































































































































































































































































































































































































































































































































































































































































































































































































































































































































































































































































































































































































































































































