ಮತ್ಸ್ಯಗಂಧ ಚಲನಚಿತ್ರ ಅದ್ದೂರಿಯಾಗಿ ಬಿಡುಗಡೆ,ಅಭಿಮಾನಿಗಳಿಗೆ ಹರ್ಷ

ಕುಂದಾಪುರ:ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಮತ್ಸ್ಯಗಂಧ ಚಲನಚಿತ್ರ ಶುಕ್ರವಾರ ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.ಕರಾವಳಿ ಭಾಗದ ಜನರ ಜೀವನ ಪದ್ಧತಿ ಹಾಗೂ ಮೀನುಗಾರರ ಬದುಕಿನ ಬಗ್ಗೆ ಕಥಾ ಹಂದರವನ್ನು ಹೊಂದಿರುವ ಮತ್ಸ್ಯಗಂಧ ಚಲನಚಿತ್ರ ಜನರ ಮನಗೆದ್ದಿದ್ದು ಸಿನಿಮಾ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟನೆ ಮಾಡುವ ಮೂಲಕ ಈಗಾಗಲೇ ಕನ್ನಡಿಗರ ಮನ ಗೆದ್ದಿರುವ ಮತ್ಸ್ಯಗಂಧ ಚಲನಚಿತ್ರ ನಟ ಬೈಂದೂರು ತಾಲೂಕಿನ ನಾಗರಾಜ ಪೂಜಾರಿ ಅವರ ನಟನೆಗೆ ಸಿನಿ ಪ್ರೇಕ್ಷಕರು ಫಿದಾ […]

ಕಾಸನಕಟ್ಟೆ ಗೇರು ತೋಪಿನಲ್ಲಿ ಅಗ್ನಿ ದುರಂತ

ಕುಂದಾಪುರ:ತಾಲೂಕಿನ ನೂಜಾಡಿ ಗ್ರಾಮದ ಕಾಸನಕಟ್ಟೆ ಗೇರು ತೋಪಿನಲ್ಲಿ ಶುಕ್ರವಾರ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಸುಮಾರು 10 ಹೆಕ್ಟೇರ್ ನಷ್ಟು ಗೇರು ತೋಟ ಅಗ್ನಿಗೆ ಆಹುತಿ ಆಗಿದೆ. ಫಾರೇಸ್ಟ್ ಆನಂದ ಬಳೆಗಾರ್,ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಹೊಸಾಡು ಕೆಸಿಡಿಸಿ ಸಿಬ್ಬಂದಿಗಳು ಹಾಗೂ ಹಕ್ಲಾಡಿ ಪಂಚಾಯಿತಿ ಸದಸ್ಯ ಅಶೋಕ.ಕೆ ಪೂಜಾರಿ,ಆಶಾ ಕಾರ್ಯಕರ್ತೆ ಶಾರದ,ಉಗ್ರಾಣಿ ರತ್ನಾಕರ್,ಶಂಕರನಾರಯಣ ಭಟ್,ಗೋವಿಂದ ಪೂಜಾರಿ,ಸ್ಥಳೀಯರು ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿರು.

ಸಿ ಆರ್ ಝೆಡ್ ಸರಳೀಕರಣ,ಕಚೇರಿ ಸ್ಥಳಾಂತರಕ್ಕೆ ಗಂಟಿಹೊಳೆ ಆಗ್ರಹ

ಕುಂದಾಪುರ:ಮರವಂತೆಯಲ್ಲಿ ಕೈಗೊಳ್ಳಲಾಗುತ್ತಿರುವ ಪ್ರವಾಸೋಧ್ಯಮ ಚಟುವಟಿಕೆಗೆ ಸಂಬಂಧಪಟ್ಟಂತಹ ಯೋಜನೆಗಳು ಸಿ ಆರ್ ಝೆಡ್ ಕಾರಣದಿಂದ ಸ್ಥಗಿತಗೊಂಡಿದೆ.ಕೇರಳ,ಗೋವಾ ರಾಜ್ಯಗಳಂತೆ ಕರ್ನಾಟಕದಲ್ಲೂ ಸಿಆರ್‍ಝೆಡ್ ನಿಯಾಮವಳಿಗಳನ್ನು ಸರಳೀಕರಣಗೊಳಿಸುವಂತೆ ಹಾಗೂ ಸಿ ಆರ್ ಝೆಡ್ ಕಚೇರಿಯನ್ನು ಕರಾವಳಿ ಭಾಗಕ್ಕೆ ಸ್ಥಳಾಂತರಿಸುವಂತೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಸದನದಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಬಳಸಿಕೊಂಡು ಆರ್ಥಿಕ ಸಂಪನ್ಮೂಲವನ್ನು ಗಳಿಸಲು ವಿಫುಲವಾದ ಅವಕಾಶಗಳಿವೆ.ಬಹುತೇಕ ರಾಜ್ಯಗಳು ಈ ಅವಕಾಶವನ್ನು ಸಕಾರಾತ್ಮಕವಾಗಿ ಬಳಸಿಕೊಂಡಿವೆ.ಆದರೆ ಕರ್ನಾಟಕ ರಾಜ್ಯ ಈ ವಿಚಾರದಲ್ಲಿ ಉದಾಸೀನತೆ ತೋರುತ್ತಿದೆ […]

You cannot copy content of this page