ಶ್ರೀವಿನಾಯಕ ಯುವಕ ಮಂಡಲ ನೆಂಪು ರಜತ ಮಹೋತ್ಸವ ಸಂಭ್ರಮ,ನೆಂಪು ಉತ್ಸವ

ಕುಂದಾಪುರ:ಶ್ರೀವಿನಾಯಕ ಯುವಕ ಸಂಘ ನೆಂಪು ಪ್ರಸ್ತುತ್ತಿಯಲ್ಲಿ ರಜತ ಮಹೋತ್ಸವದ ಪ್ರಯುಕ್ತ ನೆಂಪು ಉತ್ಸವ ಕಾರ್ಯಕ್ರಮ ನೆಂಪು ಕರ್ನಾಟಕ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.ಶ್ರೀವಿನಾಯಕ ಯುವಕ ಮಂಡಲ ನೆಂಪು ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನೆಂಪು ವಿನಾಯಕನಿಗೆ ಮಹಾ ರಂಗಪೂಜೆ,ತೆಂಕು-ಬಡಗು ಸೊರ್ಧಾತ್ಮಕ ಗಾನ ವೈಭವ,ನೆಂಪು ಯಕ್ಷ ಕಂಪು ಕಾರ್ಯಕ್ರಮ,ಸಹಾಯಹಸ್ತ,ರಜತ ಪುರಸ್ಕಾರ,ಸಾಧಕರಿಗೆ ಸನ್ಮಾನ,ಸಾಂಸ್ಕ್ರತಿಕ ಉತ್ಸವ,ರಜತ ಪುರಸ್ಕಾರ ಕಾರ್ಯಕ್ರಮ,ಹುಟ್ಟೂರು ಸನ್ಮಾನ,ಯಕ್ಷಗಾನ ನೃತ್ಯ,ಪ್ರಸಿದ್ದ ಸಿನಿ ಗಾಯಕರಿಂದ ಸಂಗೀತೋತ್ಸವ ಕಾರ್ಯಕ್ರಮ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯೋತ್ಸವ,ಹೆಂಗ್ಸ್ರ್ ಪಂಚೇತಿ ಕಾರ್ಯಕ್ರಮ ಜರುಗಿತು. ಶಿವಮೊಗ್ಗ […]

ಸಂಪರ್ಕ ರಸ್ತೆ,ಚರಂಡಿ ದುರಸ್ತಿಗೊಳಿಸುವಂತೆ ಗಂಗೊಳ್ಳಿಯಲ್ಲಿ ಮೌನ ಪ್ರತಿಭಟನೆ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಪಂಜುರ್ಲಿ ದೇವಸ್ಥಾನದ ಬಳಿ ಹಾದು ಹೋಗಿರುವ ತೆರೆದ ಬೃಹತ್ ಚರಂಡಿಯನ್ನು ದುರಸ್ಥಿಗೊಳಿಸುವಂತೆ ಹಾಗೂ ಪಂಜುರ್ಲಿ ದೇವಸ್ಥಾನಕ್ಕೆ ದಾರಿ ಕಲ್ಪಿಸುವಂತೆ ಆಗ್ರಹಿಸಿ ಗಂಗೊಳ್ಳಿ ಕಳುವಿನಬಾಗಿಲು ಚರಂಡಿ ಬಳಿ ಸ್ಥಳೀಯರು ಮತ್ತು ಮಕ್ಕಳು ಪೋಸ್ಟರ್ ಹಿಡಿದು ಬೃಹತ್ ಪ್ರತಿಭಟನೆಯನ್ನು ಭಾನುವಾರ ನಡೆಸಿದರು.ಗಂಗೊಳ್ಳಿ ಗ್ರಾಮದ ದೊಡ್ಡಹಿತ್ಲು ಪಂಜುರ್ಲಿ ದೇವಸ್ಥಾನದ ಬಳಿ ಹಾದುಹೋಗಿರುವ ತೆರೆದ ಚರಂಡಿ ಕಲುಷಿತ ಕಪ್ಪು ನೀರಿನೊಂದಿಗೆ ಹರಿಯುತ್ತಿದೆ.ತೋಡಿನಲ್ಲಿ ಹರಿಯುವ ತ್ಯಾಜ್ಯ ದುರ್ನಾತ ಬೀರುತ್ತಿದೆ.ಸಾಂಕ್ರಮಿಕ ರೋಗ ಹರಡುವ ಭೀತಿ ಇದೆ.ಸೊಳ್ಳೆ ಕಡಿತದಿಂದ ಮಕ್ಕಳು ಸಂಕಟ ಪಡುತ್ತಿದ್ದಾರೆ.ಚರ್ಮ ರೋಗ […]

ಕ್ರಿಕೆಟ್ ಪಂದ್ಯಾಟದಲ್ಲಿ ಮಿಂಚಿದ ಕುಂದಾಪುರದ ಪ್ರತಿಭೆ

ಕುಂದಾಪುರ:ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಮಹಿಳಾ ದಿವ್ಯಾಂಗರ ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಶ್ರೀಲತಾ,ನಿಶ್ಚಿತ ಹೊಸೂರು,ಸೃಜನಾ ಎಸ್.ಪಿ ಅವರು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.ರಾಷ್ಟ್ರಮಟ್ಟದ ಮಹಿಳಾ ದಿವ್ಯಾಂಗರ ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕ ತಂಡ ಜಯಭೇರಿ ಬಾರಿಸಿದೆ.

You cannot copy content of this page