ಇಬ್ರಾಹಿಂ ಗಂಗೊಳ್ಳಿಗೆ ಸನ್ಮಾನ

ಕುಂದಾಪುರ:ತುರ್ತು ಸಂದರ್ಭದ ಪರಿಸ್ಥಿತಿಯಲ್ಲಿ ಹಾಗೂ ಅಪಘಾತದ ಸಮಯದಲ್ಲಿ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲು,ಅನಾಥ ಶವಗಳನ್ನು ಶವಾಗಾರಕ್ಕೆ ತಲುಪಿಸಲು ಆಂಬ್ಯುಲೆನ್ಸ್ ಸೇವೆ ಮೂಲಕ ಜನಾಸೇವಾ ಕಾರ್ಯಗಳನ್ನು ಮಾಡುತ್ತಿರುವ ಜೀವರಕ್ಷಕ ಎಂದೆ ಖ್ಯಾತಿಗಳಿಸಿರುವ ಸಮಾಜ ಸೇವಕ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ನಿವಾಸಿಯಾಗಿರುವ ಮೊಹಮ್ಮದ್ ಇಬ್ರಾಹಿಂ ಗಂಗೊಳ್ಳಿ ಅವರನ್ನು ಗಂಗೊಳ್ಳಿಯಲ್ಲಿ ನಡೆದ ಜೈ ಜವಾನ್ ಜೈ ಕಿಸಾನ್ ಕ್ರಿಕೆಟ್ ಟ್ರೋಫಿ-2024 ರ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗಂಗೊಳ್ಳಿ:ಪೋಸ್ಟರ್ ಅಳವಡಿಸಿ ಪ್ರತಿಭಟನೆ

ಕುಂದಾಪುರ:ಗಂಗೊಳ್ಳಿ ಪಂಜುರ್ಲಿ ದೇವಸ್ಥಾನದ ಸಮೀಪ ಹಾದು ಹೋಗಿರುವ ಚರಂಡಿಯನ್ನು ಅಭಿವೃದ್ಧಿಗೊಳಿಸಲು ಆಗ್ರಹಿಸಿ ಗಂಗೊಳ್ಳಿ ಕಳುಹಿನ ಬಾಗಿಲು ಚರಂಡಿ ಬಳಿ ಪೋಸ್ಟರ್ ಅಳವಡಿಸಿ ಪ್ರತಿಭಟನೆಯನ್ನು ಸಾರ್ವಜನಿಕರು ಕೈಗೊಂಡಿದ್ದಾರೆ.ಈ ಸಂಬಂಧ ಸಾಮಾಜಿಕ ಜಾಲಾತಾಣಗಳಲ್ಲಿ ಕೂಡ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಅರಾಟೆಯಲ್ಲಿ ಭೀಕರ ಅಪಘಾತ ಬ್ಯಾಂಕ್ ಮ್ಯಾನೇಜರ್ ಸಾವು

ಕುಂದಾಪುರ:ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಾಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೆನರಾ ಬ್ಯಾಂಕ್ ಮರವಂತೆ ಶಾಖೆ ಮ್ಯಾನೇಜರ್ ಮುಂಬಯಿ ಮೂಲದ ನಿವಾಸಿ ರಾಹುಲ್ ಬಾಲಕೃಷ್ಣ ರಂಖಬ್ಮೆ ಎನ್ನುವ ವ್ಯಕ್ತಿ ಶನಿವಾರ ಸಾವನ್ನಪ್ಪಿದ ಘಟನೆ ನಡೆದಿದೆ.ಬೈಂದೂರು ಕಡೆಯಿಂದ ಕುಂದಾಪುರ ಕಡೆಯಿಂದ ಸಾಗುತ್ತಿದ್ದ ಕೇರಳ ನೋಂದಣಿ ಹೊಂದಿರುವ ಲಾರಿ ಅರಾಟೆ ಬಳಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬೈಕ್ ಸವಾರ […]

You cannot copy content of this page