ಜನವರಿ.22 ರಿಂದ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ಆರಂಭ

ಕುಂದಾಪುರ:ಮೂರು ವರ್ಷಗಳ ಕಾಲದ ಹುಡುಕಾಟದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಶ್ರೀ ದೇವಿ ಮೂರ್ತಿ ಕೆತ್ತನೆಗೆ ಬೇಕಾದಂತಹ ರಕ್ತ ಚಂದನ ಮರ ದೊರಕಿದೆ.ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಸರಕಾರದ ನಿಯಮದ ಪ್ರಕಾರ ಮರವನ್ನು ದೇವಸ್ಥಾನದ ವತಿಯಿಂದ ಕೊಂಡುಕೊಳ್ಳಲಾಗಿದ್ದು. ಭವ್ಯ ಮೆರವಣಿಗೆಯಲ್ಲಿ ಈ ಹಿಂದೆ ಕರೆತರಲಾಗಿತ್ತು.ಶ್ರೀದೇವಿ ಮೂರ್ತಿ ಕೆತ್ತನೆ ಕಾರ್ಯ ಮುಗಿದಿದ್ದು ಬಹಳಷ್ಟು ಸುಂದರವಾಗಿ ಮೂಡಿ ಬಂದಿದೆ. ಶ್ರೀ ಭದ್ರಮಹಾಕಾಳಿ ಅಮ್ಮನವರ ಪ್ರತಿಷ್ಠಾಮಹೋತ್ಸವ ಕಾರ್ಯಕ್ರಮ ಜ.22 ರಿಂದ ಜ.24 ರ ವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಕಟ್‍ಬೇಲ್ತೂರು ಭದ್ರಮಹಾಕಾಳಿ […]

ಸರಕಾರಿ ಕಿರಿಯ ಪ್ರಾಥಮಿಕ ಹೆಮ್ಮುಂಜೆ ಶಾಲೆಯಲ್ಲಿ, ಪ್ರತಿಭಾ ಸಿಂಚನ-2 ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ:ಸರಕಾರಿ ಕಿರಿಯ ಪ್ರಾಥಮಿಕ ಹೆಮ್ಮುಂಜೆ ಶಾಲೆಯಲ್ಲಿ ಪ್ರತಿಭಾ ಸಿಂಚನ-2 ಕಾರ್ಯಕ್ರಮ ನಡೆಯಿತು. ಶಾಸಕ ಗುರುರಾಜ್ ಗಂಟಿಹೊಳೆ ಶುಭ ಹಾರೈಸಿದರು.ರಾಜೀವ್ ಶೆಟ್ಟಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉದ್ಘಾಟಿಸಿದರು.ದಾನಿಗಳಾದ ಅಶೋಕ್ ಶೆಟ್ಟಿ ಬೆಳ್ಳಾಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಶಾಲಾ ಕಟ್ಟಡವನ್ನು ಹೊಸದಾಗಿ ನಿರ್ಮಿಸುವುದರ ಕುರಿತು ಭರವಸೆ ನೀಡುವುದರೊಂದಿಗೆ ತಾವು ಕಲಿತ ಶಾಲೆಗೆ ಜೊತೆ ಸದಾ ಬೆಂಗಾವಲಾಗಿ ನಿಲ್ಲುತ್ತೇನೆ ಎನ್ನುವ ವಿಶ್ವಾಸ ನುಡಿಯನ್ನಾಡಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ಅವರ ಶಾಲೆಯ ಕುರಿತಾದ ನಿರಂತರ ಹೋರಾಟದ ಫಲವನ್ನು ಶ್ಲಾಘಿಸಿದರು.ಇನ್ನು […]

ಶರಧಿ ಆರ್ ಗೆ ಚಾಂಪಿಯನ್ ಪ್ರಶಸ್ತಿ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ದೆಯಲ್ಲಿ ಗಂಗೊಳ್ಳಿ ಖಾರ್ವಿಕೇರಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಶರ ಆರ್ ಚಾಂಪಿಯನ್ ಪ್ರಶಸ್ತಿಯನ್ನು ಜಯಿಸಿದ್ದಾರೆ.ಶಿಕ್ಷಕರಾದ ಪ್ರಸನ್ನ ಕೆ,ಮಹಾಲಕ್ಷ್ಮೀ,ಸುನೀತ ತರಬೇತಿ ನೀಡಿದ್ದರು.ಈಕೆ ಅರಾಟೆ ರಾಘವೇಂದ್ರ ಪೂಜಾರಿ ಮತ್ತು ಶಿಕ್ಷಕಿ ಯಶೋದ ದಂಪತಿ ಪುತ್ರಿ.

You cannot copy content of this page