ಹೊಳ್ಮಗೆ ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಗೆಂಡ ಸೇವೆ,ಮಹಾ ಅನ್ನಸಂಪರ್ಣೆ

ಕುಂದಾಪುರ:ಹೊಳ್ಮಗೆ ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಗೆಂಡ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಹಬ್ಬದ ಅಂಗವಾಗಿ ಶ್ರೀ ದೇವರಿಗೆ ಮಹಾ ಮಂಗಳಾರತಿ ಸೇವೆ,ಹಣ್ಣು ಕಾಯಿ ಸೇವೆ,ಗೆಂಡ ಸೇವೆ,ಯಕ್ಷಗಾನ ಸೇವೆ,ದೈವ ದರ್ಶನ ಸೇವೆ,ಪಾಣರಾಟ ಸೇವೆ,ತುಲಾಭಾರ ಸೇವೆ,ವಿಶೇಷ ಪೂಜೆ ಜರುಗಿತು.ವಾರ್ಷಿಕ ಹಬ್ಬದ ಪ್ರಯುಕ್ತ ದೈವಸ್ಥಾನವನ್ನು ಪುಷ್ಪಾಲಂಕಾರ ಹಾಗೂ ದೀಪಾಲಂಕಾರದಿಂದ ಶೃಂಗಾರಿಸಲಾಗಿತ್ತು.ಶ್ರೀಹೋರ್ ಬೊಬ್ಬರ್ಯ ದೈವಸ್ಥಾನ,ಶ್ರೀ ನೆತ್ರ ಹ್ಯಾಗುಳಿ ಹಾಗೂ ಬಂಟರ ಗರಡಿ ದೈವಸ್ಥಾನದ ಮೂರು ದೈವಗಳು ಜೊತೆಯಾಗಿ ಕೊಡಿ […]

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಸ್ಟಾಕ್ ಮಾರ್ಕೆಟ್,ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ ಸ್ಟಾಕ್ ಮಾರ್ಕೆಟ್ ನಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಹೂಡಿಕೆಯ ಕುರಿತು ಕಾರ್ಯಾಗಾರ ನಡೆಯಿತು. ಅಕ್ಷತ್ರಾಜ್ ಜೈನ್ ಹಿರಿಯ ಸಹಾಯಕ ಪ್ರಾಧ್ಯಾಪಕರು ನಿರ್ವಹಣಾ ಅಧ್ಯಯನ ವಿಭಾಗ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್ ಮಿಜಾರು ಮೂಡಬಿದ್ರೆ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಹೂಡಿಕೆಯ ಕುರಿತು ಯಾವೆಲ್ಲ ನೆಲೆಯಲ್ಲಿ ಮುಂದುವರೆಯಲು ಸಾಧ್ಯವಿದೆ ಎನ್ನುವುದರ ಕುರಿತು ಸೂಕ್ತವಾದ ಮಾಹಿತಿಯನ್ನು ನೀಡಿದರು. […]

ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಪ್ರಾನಂಜಲಿ ರಾಜ್ಯಕ್ಕೆ ಪ್ರಥಮ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಪದವಿ ಕಾಲೇಜಿನ ವಿದ್ಯಾರ್ಥಿನಿ ಪ್ರಾನಂಜಲಿ ಕೆ.ಹೆಚ್ ಬಿಸ್ಸಿ. ಪುಡ್ ಟೆಕ್ನಾಲಜಿ 2021-2024 ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ 90.57.% ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್‌ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.ಕಾಲೇಜಿನ ಸಂಸ್ಥಾಪಕರಾದ ಸುಬ್ರಮಣ್ಯ ಮತ್ತು ನಿರ್ದೇಶಕಿ ಮಮತಾ ಹಾಗೂ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸೀಮಾ ಜಿ ಭಟ್, ಎಲ್ಲಾ ಉಪನ್ಯಾಸಕ ವೃಂದವರು,ಬೋಧಕ,ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.

You cannot copy content of this page