ಆಲಸ್ಯಕರ ಜೀವನ ಪದ್ಧತಿಯಿಂದ ಹಣದುಬ್ಬರ ಏರಿಕೆ, ದುಡಿಯುವ ಕೈಗಳಿಂದ ಅಭಿವೃದ್ಧಿ:ಡಾ. ಹೆಚ್.ಎಸ್.ಶೆಟ್ಟಿ

ಕುಂದಾಪುರ:ನಮ್ಮ ದೇಶದಲ್ಲಿ ಆಹಾರ ಹಣದುಬ್ಬರ ಕ್ಕೆ ಸರ್ಕಾರ ಕೈಗೊಳ್ಳುವ ಕ್ರಮಗಳ ಜೊತೆಗೆ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗಿದೆ.ಆಲಸ್ಯಕರ ಜೀವನ ಪದ್ಧತಿಯಿಂದ ಹಣದುಬ್ಬರ ಏರಿಕೆ ದರದಲ್ಲಿ ಸಾಗುತ್ತಿದೆ ಎಂದು ಮೈಸೂರು ಮರ್ಕಂಟೈಲ್ ಕಂಪೆನಿಯ ಚೇರ್ ಮೆನ್ ಉದ್ಯಮತಾರೆ ಡಾ. ಹೆಚ್.ಎಸ್.ಶೆಟ್ಟಿ ಹೇಳಿದರು.ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಗುಸಿಟಿ ಮೈದಾನದಲ್ಲಿ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಆಯೋಜನೆ ಗೊಂಡಿರುವ ಬೈಂದೂರು ಜೋಡುಕೆರೆ ಕಂಬಳದ ಅಂಗವಾಗಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.ಬಸ್ರೂರು ಮಹತೋಬಾರ […]

ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಕುಂದಾಪುರದಲ್ಲಿ ಶುಭಾರಂಭ

ಕುಂದಾಪುರ:ಸಿಸಿಟಿವಿ ಮತ್ತು ಮಾನಿಟರಿಂಗ್ ಕ್ಷೇತ್ರದಲ್ಲಿ ಈಗಾಗಲೇ ಬಹಳಷ್ಟು ಹೆಸರನ್ನು ಗಳಿಸಿರುವ ದಿಗಂತ ಶೆಟ್ಟಿ ಮತ್ತು ದಿಕ್ಷೀತ್ ಶೆಟ್ಟಿ ಮಾಲಿಕತ್ವದಲ್ಲಿ ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಬುಧವಾರ ಕುಂದಾಪುರ ಯುವ ಜನಾ ಕಾಂಪ್ಲೆಕ್ಸ್ನಲ್ಲಿ ಅದ್ದೂರಿಯಾಗಿ ಶುಭರಂಭಗೊಂಡಿತು.ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖೇನ ಸಂಸ್ಥೆಯ ಶುಭಾರಂಭ ಕಾರ್ಯಕ್ರಮವನ್ನು ಮಾಡಲಾಯಿತು.ಗಣ್ಯರು,ಉದ್ಯಮಿಗಳು,ಅಧಿಕಾರಿ ವರ್ಗದವರು ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಶುಭಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿ.ಕಛೇರಿ ನಿರ್ವಹಣೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಪ್ರಶಂಸಿಸಿದ ಅವರು ಸಂಸ್ಥೆ ಸಾರ್ವಜನಿಕ ಕ್ಷೇತ್ರದಲ್ಲಿ ಹೊಸ […]

ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಉದಯ ಜೋಗಿ ಹೃದಯಘಾತದಿಂದ ನಿಧನ

ಕುಂದಾಪುರ:ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ನಿವಾಸಿಯಾಗಿರುವ ಬೈಂದೂರಿನ ಉದಯ ಕುಮಾರ್ ಜೋಗಿ (ಐಎಫ್‌ಎಸ್) ಅವರು ಸಿಮ್ಲಾಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ತೀವೃತರಹದ ಹೃದಯಾಘಾತಕ್ಕೆ ಒಳಗಾಗಿ ಶನಿವಾರ ನಿಧನರಾಗಿದ್ದಾರೆ.ಮೃತದೇಹ ಸೋಮವಾರ ಹುಟ್ಟೂರು ತಲುಪಲಿದೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.ಅವರಿಗೆ ಪತ್ನಿ ಸಹಿತ ಇಬ್ಬರು ಪುತ್ರರು ಇದ್ದಾರೆ.ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುವ ಉದಯ ಜೋಗಿ ಅವರ ಅಕಾಲಿಕ ಸಾವಿನಿಂದ ಬಹಳಷ್ಟು ದುಖಃವನ್ನುಂಟು ಮಾಡಿದೆ ಎಂದು ಕೆಸಿಡಿಸಿ ಸಿಬ್ಬಂದಿಗಳು ತಮ್ಮ ನೋವವನ್ನು ಹಂಚಿಕೊ0ಡಿದ್ದಾರೆ.

You cannot copy content of this page