ತ್ರಾಸಿ ಜಂಕ್ಷನ್‍ನಲ್ಲಿ ಅಪಘಾತ:ಕಾರು ಜಖಂ

ತ್ರಾಸಿ:ಚರ್ಚ್ ರೋಡ್ ನಿಂದ ಜಂಕ್ಷನ್ ಮೂಲಕ ವಿರುದ್ಧ ದಿಕ್ಕಿನಲ್ಲಿ ಕ್ರಾಸಿಂಗ್ ತೆಗೆದುಕೊಂಡು ಸಾಗುತ್ತಿದ್ದ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರುಗಳೆರಡು ಜಖಂ ಗೊಂಡಿದ್ದ ಘಟನೆ ಮಂಗಳವಾರ ನಡೆದಿದೆ.ಅಪಘಾತದಲ್ಲಿ ಚಾಲಕರಿಬ್ಬರು ಪಾರಾಗಿದ್ದಾರೆ.

ಬ್ಯಾಗ್ ಮರಳಿಸುವಂತೆ ಮನವಿ

ಕುಂದಾಪುರ:ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದರಾದ ಐರ್ಬೈಲು ಆನಂದ ಶೆಟ್ಟಿ ಅವರ ಮಗಳು ಸೀಮಾ ಶೆಟ್ಟಿ ಎಂಬುವರು ಏ.೨೩ ರ ಬುಧವಾರ ರಾತ್ರಿ ಐರ್ಬೈಲ್‌ನಲ್ಲಿ ಯಕ್ಷಗಾನವನ್ನು ವೀಕ್ಷಿಸಿ ಆಟೋದಲ್ಲಿ ಸಿದ್ದಾಪುರ ನೇರಳಕಟ್ಟೆ ನೆಂಪು ಬಗ್ವಾಡಿ ಕ್ರಾಸ್ ಹಕ್ಲಾಡಿ ಮಾರ್ಗದಲ್ಲಿ ಚಲಿಸುತ್ತಿರುವಾಗ ಆಟೋದ ಹಿಂಭಾಗದಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನೊಳಗೊಂಡ ಬ್ಯಾಗ್ ಮಾರ್ಗ ಮಧ್ಯೆ ಬಿದ್ದು ಹೋಗಿರುತ್ತದೆ.ಬ್ಯಾಗ್‌ನಲ್ಲಿ ಆಧಾರ್ ಕಾರ್ಡ್,ಪಾನ್ ಕಾರ್ಡ್,ಎಟಿಎಂ ಕಾರ್ಡ್,ಚುನಾವಣಾ ಗುರುತಿನ ಚೀಟಿ,೨೦ ಪವನ್ ಚಿನ್ನ ಹಾಗೂ ೨೦ ಸಾವಿರ.ರೂ ಇದ್ದಿದ್ದು ಬುಧವಾರ ರಾತ್ರಿ ಐರ್ಬೈಲ್‌ನಲ್ಲಿ ಯಕ್ಷಗಾನವನ್ನು ನೋಡಿಕೊಂಡು […]

ಕುಂದಾಪುರ\ತೀರ್ಥಹಳ್ಳಿ:ಸ್ಕೂಟಿಗೆ ಬಸ್ ಡಿಕ್ಕಿ,ವ್ಯಕ್ತಿ ಸಾವು

ಕುಂದಾಪುರ:ಆಗುAಬೆ ಕಡೆ ಯಿಂದ ತೀರ್ಥ ಹಳ್ಳಿಗೆ ಸಾಗುತ್ತಿದ್ದ ಬಸ್ ತೀರ್ಥಹಳ್ಳಿ ಎಂಬಲ್ಲಿ ಕುಂದಾಪುರ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ತ್ರಾಸಿ ಗ್ರಾಮದ ಮೊವಾಡಿ ನಿವಾಸಿ ಗುರುರಾಜ ಎಸ್ ಕಾಂಚನ್ (೪೩) ಸಾವನ್ನಪ್ಪಿದ್ದ ಘಟನೆ ಮಂಗಳವಾರ ನಡೆದಿದೆ.ಏ.೨೫ ರಂದು ಮನೆಯಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಯಿಂದ ಗುರುರಾಜ ಕಾಂಚನ್ ಅವರು ಸ್ಕೂಟಿಯಲ್ಲಿ ಕುಂದಾಪುರಕ್ಕೆ ಬರುತ್ತಿರುವಾಗ ಇವೊಂದು ಘಟನೆ ನಡೆದಿದೆ ಎಂದು ಅವರ ಸಂಬAಧಿ ಸಂಜಯ್ ಪೂಜಾರಿ ತಿಳಿಸಿದ್ದಾರೆ.

You cannot copy content of this page