ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ತಂತ್ರಜ್ಞಾನ ಮಾಹಿತಿ ಕಾರ್ಯಗಾರ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಡೈರೆಕ್ಟರ್ ಇಂಚಾರ್ಜ್,ಪಿಪಿಸಿ ಕೆರಿಯರ್ ಕೌನ್ಸಿಲಿಂಗ್ ಕೇಂದ್ರ ಡಾ.ಪಿ.ಎಸ್ ಐತಾಳ್ ಅವರು, ನ್ಯಾನೋ ತಂತ್ರಜ್ಞಾನ, ವರ್ಚುಯಲ್ ರಿಯಾಲಿಟಿ, ಕ್ಲೌಡ್ ಕಂಪ್ಯೂಟಿಂಗ್ ,ಕ್ವಾಂಟಮ್ ಕಂಪ್ಯೂಟಿಂಗ್ ,ಐಒಟಿ, 3 ಡಿ ಪ್ರಿಂಟಿಂಗ್,ಮುಂತಾದ ಉದಯೋನ್ಮುಖ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ, ನಿರ್ದೇಶಕಿ ಮಮತಾ ಹಾಗೂ ಕಾಲೇಜಿನ ಪ್ರಿನ್ಸಿಪಾಲ್ ಡಾ ಸೀಮಾ ಜಿ ಭಟ್,ಬಿ.ಸಿ.ಎ ವಿಭಾಗದ […]

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಂದ ಕೈಮಗ್ಗ ಘಟಕಕ್ಕೆ ಕೈಗಾರಿಕಾ ಭೇಟಿ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕೈಮಗ್ಗ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು.ಉಡುಪಿ ಬ್ರಹ್ಮಗಿರಿ ಇಲ್ಲಿನ ತಾಳಿಪಾಡಿ ನೇಕಾರರ ಸಂಘ ಮತ್ತು ನೇಯ್ಗೆ ಘಟಕಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಹಳೆಯ ಸಾಂಪ್ರದಾಯಿಕ ನೇಯ್ಗೆ ತಯಾರಿಕಾ ವಿಧಾನವನ್ನು ವೀಕ್ಷಿಸಿ,ಮಾಹಿತಿಯನ್ನು ಪಡೆದು ಕೊಂಡರು. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಚರ್ಚಿಸಿದರು.ವಿಭಾಗ ಮುಖ್ಯಸ್ಥೆ ಉಪನ್ಯಾಸಕಿ ಅಶ್ವಿನಿ ಮತ್ತು ಸ್ವಾತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪರೀಕ್ಷೆಯಲ್ಲಿ ಅಂಕ ನೀಡುವಂತೆ ದೈವದ ಮೊರೆ ಹೋದ ವಿದ್ಯಾರ್ಥಿ

ಕುಂದಾಪುರ:ಪರೀಕ್ಷೆಯಲ್ಲಿ ತಾನು ಅಂದು ಕೊಂಡಷ್ಟು ಮಾಕ್ರ್ಸ್ ನೀಡುವಂತೆ ನಿವೇದಿಸಿ ವಿದ್ಯಾರ್ಥಿಯೊಬ್ಬ (ಳು) ಹೊಳ್ಮಗೆ ಹೋರ್ ಬೊಬ್ಬರ್ಯ ದೈವದ ಮೊರೆ ಹೋಗಿದ್ದು.ಚೀಟಿ ಬರೆದು ಹುಂಡಿಗೆ ಹಾಕಿರುವ ಕುತೂಹಲಕರ ವಿಷಯ ಹುಂಡಿ ಒಡೆಯುವ ಸಮಯದಲ್ಲಿ ಬೆಳಕಿಗೆ ಬಂದಿದೆ.ವಿದ್ಯಾರ್ಥಿ ಬರೆದು ಹುಂಡಿಗೆ ಹಾಕಿರುವ ಚೀಟಿ ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದೆ.

You cannot copy content of this page