ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹಕ್ಕೆ,ರಕ್ತ ಚಂದನ ಮರ ಹಸ್ತಾಂತರ,ಭವ್ಯ ಮೆರವಣಿಗೆ

ಕುಂದಾಪುರ:ತಾಲೂಕಿನ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹ ರಚನೆಗೆ ಬಳಕೆ ಮಾಡಲಿರುವ ರಕ್ತ ಚಂದನ ಮರವನ್ನು ಕೊಲ್ಲೂರಿನಿಂದ ಕಟ್ ಬೇಲ್ತೂರು ಅಮ್ಮನವರ ಸನ್ನಿಧಾನದ ವರೆಗೆ ಭವ್ಯ ಮೆರವಣಿಗೆ ಮೂಲಕ ಬುಧವಾರ ಬರಮಾಡಿಕೊಳ್ಳಲಾಯಿತು.ಇತಿಹಾಸ ಪ್ರಸಿದ್ಧ ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹಕ್ಕೆ ರಕ್ತ ಚಂದನ ಮರವನ್ನು ಶಿವಮೊಗ್ಗ ದಿಂದ ಕೊಲ್ಲೂರು ಮಾರ್ಗವಾಗಿ ಪುರ ಮೆರವಣಿಗೆ ಮೂಲಕ ಅಮ್ಮನವರ ಸನ್ನಿಧಾನವನ್ನು ಪ್ರವೇಶ ಮಾಡಿದೆ.ಈ ಸಂದರ್ಭದಲ್ಲಿ ಶ್ರೀ ಭದ್ರಮಹಾಕಾಳಿ ದೈವಸ್ಥಾನ ಕಟ್‍ಬೇಲ್ತೂರು ಮೊಕ್ತೇಸರರು,ಮೂರು ಮನೆಯವರು ಹಾಗೂ ಮೂರು ಗ್ರಾಮಸ್ಥರು,ಆಡಳಿತ ಸಮಿತಿ […]

ಜೂ.15 ರಂದು ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಪ್ರಧಾನ ಕಛೇರಿ ನವೀಕೃತ ಮೇಲಂತಸ್ತಿನ ಕಟ್ಟಡ ಉದ್ಘಾಟನಾ ಸಮಾರಂಭ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಪ್ರಧಾನ ಕಛೇರಿ ಅದರ ಮೇಲಂತಸ್ತಿನ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಜೂನ್.15 ರ ಶನಿವಾರ ದಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ಉತ್ತಮ ರೀತಿಯಲ್ಲಿ ಬ್ಯಾಂಕಿಂಗ್ ಸೇವೆಯನ್ನು ನೀಡುವುದರ ಮುಖೇನ ಜನಪ್ರೀತಿ ಗಳಿಸಿದೆ.ಸಂಘದ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವುದರ ಜತೆಗೆ ಆರೋಗ್ಯ ಶಿಬಿರ,ರಕ್ತದಾನ ಶಿಬಿರ,ಐ ಕ್ಯಾಂಪ್ ಆಯೋಜನೆ ಮಾಡುವುದರ ಮುಖೇನ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ.ರಾಷ್ಟ್ರೀಕೃತ […]

ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳಿಗೆ ಪುಸ್ತಕ ವಿತರಣೆ

ಕುಂದಾಪುರ:ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಅಂಪಾರು ಇಲ್ಲಿನ ವಿದ್ಯಾರ್ಥಿಗಳಿಗೆ ಕೈಗಾರಿಕೋದ್ಯಮಿ ಹಾಗೂ ದೇವಾಡಿಗ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ರಮೇಶ್ ದೇವಾಡಿಗ ವಂಡ್ಸೆ ಅವರು ಉಚಿತವಾಗಿ ಪುಸ್ತಕ ವಿತರಣೆ ಹಾಗೂ ಬೋಜನ ವ್ಯವಸ್ಥೆ ಮಾಡಿ ವಿಶೇಷ ಮಕ್ಕಳ ಕಾರ್ಯವೈಖರಿ ಹಾಗು ಶಿಕ್ಷಕರ ಸೇವಾ ಮನೋಭಾವನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಜೀವ ಪೂಜಾರಿ ವಂಡ್ಸೆ ಇವರು ಮಕ್ಕಳಿಗೆ ಸಿಹಿತಿಂಡಿ ವಿತರಿಸಿ ಉಭಯ ಕುಶಲೋಪಚರಿ ವಿಚಾರಿಸಿದರು. ಈ ಸಂದರ್ಭದಲ್ಲಿ ರವಿ ದೇವಾಡಿಗ ಉಪ್ಪಿನಕುದ್ರು,ರಘುರಾಮ ದೇವಾಡಿಗ ಕಿರಿಮಂಜೇಶ್ವರ ಮಾಸ್ಟರ್ […]

You cannot copy content of this page