ಜನತಾ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ

ಕುಂದಾಪುರ:ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲಾ ಯೋಗ ಶಿಕ್ಷಕಿ ಕು|ಅನ್ವಿತಾ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿದರು.ಜನತಾ ಪದವಿಪೂರ್ವ ಕಾಲೇಜಿನ ಅಂತರರಾಷ್ಟ್ರೀಯ ಮಟ್ಟದ ಯೋಗ ಪ್ರತಿಭೆಗಳಾದ ಕು|ಧನ್ವಿ ಮರವಂತೆ,ಕು|ತನ್ವಿತಾ,ಕು|ನಿರೀಕ್ಷಾ ಅವರಿಂದ ಹಾಗೂ ಶಾಲಾ ಆಯ್ದ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.ಕಾರ್ಯಕ್ರಮದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲಾ ಮುಖ್ಯ […]

ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಶೆಟ್ಟಿಗೆ ಸನ್ಮಾನ

ಕುಂದಾಪುರ:ನಿವೃತ್ತ ನೌಕರರ ಸಂಘ ಹೊಸಾಡು ಮುಳ್ಳಿಕಟ್ಟೆ ವತಿಯಿಂದ ನಿವೃತ್ತ ಮುಖ್ಯೋಪಾಧ್ಯಾಯರಾದ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಅವರನ್ನು ದಿ.ಜಿ.ಎಸ್ ಆಚಾರ್ಯ ಸ್ಮಾರಕ ಸಭಾಭವನ ಮುಳ್ಳಿಕಟ್ಟೆಯಲ್ಲಿ ಶನಿವಾರ ನಡೆದ ಸಂಘದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ರಾಜೀವ ಶೆಟ್ಟಿ,ವಿಶ್ವಂಭರ ಐತಾಳ್,ಕೆ.ಲಿಂಗಪ್ಪ ಗೌಡ,ತೇಜಪ್ಪ ಶೆಟ್ಟಿ,ಗಣಪ್ಪಯ್ಯ ಆಚಾರ್ಯ ಬಿ,ಭಾಸ್ಕರ ಶೆಟ್ಟಿ,ಸಂಪತ್ ಕುಮಾರ್ ಉಪಸ್ಥಿತರಿದ್ದರು.

ಮುಳ್ಳಿಕಟ್ಟೆ ಸೊಸೈಟಿಯಲ್ಲಿ ಕಳ್ಳತನಕ್ಕೆ ಯತ್ನ,ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ ಪೊಲೀಸರು

ಕುಂದಾಪುರ:ಸಿಸಿ ಟಿವಿ ಮಾನಿಟರಿಂಗ್ ತಂಡದ ಸೂಚನೆ ಮೇರೆಗೆ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಅದರ ಹೊಸಾಡು-ಮುಳ್ಳಿಕಟ್ಟೆ ಶಾಖೆ ಕಟ್ಟಡದ ಕಿಟಕಿ ಬಾಗಿಲಿನ ಸರಳನ್ನು ಮುರಿದು ಒಳನುಗ್ಗಿ ಕಳ್ಳತನವನ್ನು ಮಾಡಲು ಯತ್ನಿಸುತ್ತಿದ್ದ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪ್ರಕಾಶ್ ಬಾಬು (44) ಎಂಬಾತನನ್ನು ಗಂಗೊಳ್ಳಿ ಪೊಲೀಸ್ ಠಾಣೆ ಗುಪ್ತಚರ ಪಿಎಸ್‍ಐ ಬಸವರಾಜ್ ಕಣಶೆಟ್ಟಿ ಮತ್ತು ಸಿಬ್ಬಂದಿಗಳು ಮಿಂಚಿನ ಕಾರ್ಯಚರಣೆ ಮೂಲಕ ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.ಶುಕ್ರವಾರ ತಡ ರಾತ್ರಿ 1.44 ರ ಸುಮಾರಿಗೆ ಪಂಚಗಂಗಾ ರೈತರ ಸೇವಾ […]

You cannot copy content of this page