ಕ್ಯೂಟ್ ಕಿಡ್ಸ್ ಆಂಗ್ಲ ಮಾಧ್ಯಮ ನರ್ಸರಿ ಶಾಲೆ ಪ್ರಾರಂಭೋತ್ಸವ

ಕುಂದಾಪುರ:ಕ್ಯೂಟ್ ಕಿಡ್ಸ್ ಆಂಗ್ಲ ಮಾಧ್ಯಮ ನರ್ಸರಿ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ ಹೆಮ್ಮಾಡಿ ಬ್ರಹ್ಮಲಿಂಗೇಶ್ವರ ರೆಸಿಡೆನ್ಸಿಯಲ್ಲಿ ಇತ್ತೀಚಿಗೆ ವಿಜೃಂಭಣೆಯಿಂದ ನಡೆಯಿತು.ಆರತಿ,ಬೆಳಗಿ ತಿಲಕವಿಟ್ಟು ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.ಶಾಲೆಯ ಸಂಚಾಲಕಿ ಶುಭ ಶೇಟ್ ಸ್ವಾಗತಿಸಿದರು.ಶಿಕ್ಷಕಿ ಗಾಯತ್ರಿ ನಿರ್ವಹಿಸಿದರು.ಅನುಷಾ ವಂದಿಸಿದರು.

ಯೋಗೀಶ್‍ಗಾಗಿ ಸಮುದ್ರದಲ್ಲಿ ತೀವ್ರವಾದ ಹುಡುಕಾಟ

ಕುಂದಾಪುರ:ತುಮಕೂರು ಜಿಲ್ಲೆಯ ತಿಪಟೂರು ನಿವಾಸಿಯಾದ ಯೋಗೀಶ್ ( 22) ಎನ್ನುವ ಯುವಕ ತನ್ನ ಸ್ನೇಹಿತನೊಂದಿಗೆ ಕುಂದಾಪುರ ತಾಲೂಕಿನ ಬಿಜಾಡಿ ಸಮುದ್ರ ಕಿನಾರೆ ಬಳಿ ಜೂನ್.19 ರಂದು ವಿಹಾರ ನಡೆಸುತ್ತಿದ್ದ ಸಮಯದಲ್ಲಿ ಕಡಲ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.ಯೋಗೀಶ್ ಅವರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಮೂಲಕ ಸಮುದ್ರದಲ್ಲಿ ಹುಡುಕಾಟ ಮುಂದುವರೆಸಲಾಗಿದೆ.ಗಂಗೊಳ್ಳಿ ಕಡಲ ತೀರದಿಂದ ಸುಮಾರು ಎಂಟು ಮಾರು ದೂರದಲ್ಲಿ ಸಮುದ್ರದಲ್ಲಿ ಶವ ತೇಲುತ್ತಿರುವುದರ ಬಗ್ಗೆ ಸ್ಥಳೀಯ ಮೀನುಗಾರರು ನೀಡಿದ ಮಾಹಿತಿ ಮೇರೆಗೆ ಬೋಟ್ ಮೂಲಕ ಶುಕ್ರವಾರ ವಿಶೇಷ […]

ತ್ರಾಸಿ:ರಾಷ್ಟ್ರೀಯ ಹೆದ್ದಾರಿ ಬದಿ ಕೇಸರು ಮಯ

ಕುಂದಾಪುರ:ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್ ಬದಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರ ರಸ್ತೆ ಬದಿಯಲ್ಲಿ ಕೆಂಪು ಮಣ್ಣು ಹಾಕಿದ್ದರಿಂದ ಮಳೆಗೆ ಸುಮಾರು 3 ಕಿ.ಮೀ ವರೆಗೆ ರಾಡಿ ಎದ್ದಿದೆ.ಕೆಂಪು ಮಣ್ಣು ಮಿಶ್ರಿತ ಕೇಸರು ಮಣ್ಣು ವಾಹನಗಳ ಚಕ್ರದ ಮೂಲಕ ರಸ್ತೆ ಮೇಲೆ ಹರಡುತ್ತಿದೆ.ಕೇಸರು ಮಿಶ್ರಿತ ಕೆಂಪು ಮಣ್ಣು ಜಾರುತ್ತಿದ್ದು ಮಣ್ಣಿನ ಝರಿ ಕಣ್ಣಿಗೆ ರಾಚುತ್ತಿದೆ ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿದೆ.ಮಳೆ ಮುಂದುವರೆದಂತೆ ಇನ್ನಷ್ಟು ಕೇಸರು ಮಿಶ್ರಿತ ಕೆಂಪು ಮಣ್ಣು ರಸ್ತೆ ಮೇಲೆ ಬರುವ ಸಂಭವವಿದೆ.ವಾಹನ ಸವಾರರ […]

You cannot copy content of this page