ಬಿಜಾಡಿ ಸಮುದ್ರ ತೀರದಲ್ಲಿ ಕೊಚ್ಚಿ ಹೋಗಿದ್ದ ಯೋಗೀಶ್ ಮೃತ ದೇಹ ಕಾರವಾರದಲ್ಲಿ ಪತ್ತೆ
ಕುಂದಾಪುರ:ತುಮಕೂರು ಜಿಲ್ಲೆಯ ತಿಪಟೂರು ನಿವಾಸಿ ಯೋಗೀಶ್ ( 22) ಎಂಬಾತ ಯುವಕ ಜೂ.19 ರಂದು ಕುಂದಾಪುರ ತಾಲೂಕಿನ ಬಿಜಾಡಿ ಸಮುದ್ರ ತೀರದಲ್ಲಿ ತನ್ನ ಸ್ನೇಹಿತನೊಂದಿಗೆ ವಿಹಾರ ನಡೆಸುತ್ತಿದ್ದ ಸಮಯದಲ್ಲಿ ಕಡಲ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿ ಸಮುದ್ರದಲ್ಲಿ ನಾಪತ್ತೆಯಾಗಿದ್ದರು.ಯೋಗೀಶ್ ಮೃತ ದೇಹ ಜೂನ್.25 ರ ಮಂಗಳವಾರ ಕಾರವಾರ ಕಡಲ ತೀರದಲ್ಲಿ ಪತ್ತೆಯಾಗಿದೆ.ಮಳೆ ಮತ್ತು ಗಾಳಿ ಅಬ್ಬರದಿಂದ ಬಿಜಾಡಿ ಸಮುದ್ರ ಕಿನಾರೆಯಿಂದ ಯೋಗೀಶ್ ಮೃತ ಶರೀರ ಕಾರವಾರದತ್ತ ತೇಲಿಕೊಂಡು ಹೋಗಿದೆ ಎಂದು ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು […]





























































































































































































































































































































































































































































































































































































































































































































































































































































































































































































































































































































































































































































































































































































































































































