ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವಂತ ರಾಗಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು: ಶಾಸಕ ಗುರುರಾಜ ಗಂಟಿಹೊಳೆ

ಕುಂದಾಪುರ:ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾವಂತರಾಗಬೇಕಾದರೆಸರ್ಕಾರಿ ಶಾಲೆಗಳು ಉಳಿಯಬೇಕು.ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಸೂಕ್ತ ಸೌಲಭ್ಯ ಕಲ್ಪಿಸುವ ದೊಡ್ಡ ಕಾರ್ಯ ಆಗಬೇಕಿದೆ. ಹೀಗಾಗಿಯೇ 300 ಟ್ರೀಸ್ಸ್ ಕಲ್ಪನೆಯನ್ನು ಸಮೃದ್ಧ ಬೈಂದೂರು ಮೂಲಕ ಕಾರ್ಯರೂಪಕ್ಕೆ ತರಲಾಗಿದೆ. ಇದಕ್ಕೆ ದಾನಿಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಫೂರ್ತಿ ಕೌಶಲ್ಯ ಕೇಂದ್ರ ತೆರೆಯಲು ಸ್ವಯಂ ಸ್ಫೂರ್ತಿ ಫೌಂಡೇಶನ್ ಅಧ್ಯಕ್ಷ ನಾಗರಾಜ ಶೆಟ್ಟಿ ಜಡ್ಕಲ್ ಅವರು ಪ್ರೇರಕವಾಗಿ ನಿಂತಿದ್ದಾರೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.ಉಳ್ಳೂರು 11 […]

ಮನೆ ಮೇಲೆ ಗುಡ್ಡದ ಬರೆ ಕುಸಿದು ಹಾನಿ,ಮನೆ ಮಂದಿ ಪಾರು

ಮಂಗಳೂರು:ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಪುತ್ತೂರಿನ ಬನ್ನೂರು ಎಂಬಲ್ಲಿ ಮಜೀದ್ ಎನ್ನುವವರ ಮನೆ ಮೇಲೆ ಬರೆ ಕುಸಿದ ಪರಿಣಾಮ ಮನೆ ಧಾರಾಶಾಯವಾಗಿದೆ.ಭಾಗಶಹ ಹಾನಿ ಉಂಟಾಗಿದೆ.ಮನೆಯೊಳಗಿದ್ದ ಮಕ್ಕಳು ಮತ್ತು ಮನೆ ಮಂದಿ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.

ತುಂಬಿ ಹರಿಯುತ್ತಿದೆ ಕುಮಾರಧಾರ,ನದಿಗೆ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ

ಮಂಗಳೂರು:ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರ ಸ್ನಾನಘಟ್ಟ ಮುಳುಗಡೆ ಆಗಿದೆ.ಮುಂಜಾಗೃತ ಕ್ರಮದ ಭಾಗವಾಗಿ ನದಿಗಿಳಿಯದಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದೆ.ಭಕ್ತರುನದಿ ದಡ ದಲ್ಲೇ ತೀರ್ಥಸ್ನಾನ ಮಾಡಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಮಾಡುತ್ತಿದ್ದಾರೆ.ಕುಮಾರಧಾರ ಉಪನದಿ ದರ್ಪಣತೀರ್ಥ ಕೂಡ ಮಳೆನೀರಿನಿಂದ ತುಂಬಿ ಹರಿಯುತಿದೆ.ಕುಮಾರಧಾರ ನದಿತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿಗಳು,ಹೋಮ್ಗರ್ಡ್ಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

You cannot copy content of this page