ನೆರೆ ಪೀಡಿತ ಪ್ರದೇಶದ ಜನರಿಗೆ ಸಮೃದ್ಧ ಜನಸೇವಾ ಟ್ರಸ್ಟ್ ನಿಂದ ಊಟ ವಿತರಣೆ
ಬೈಂದೂರು:ನಿರಂತರ ಸುರಿದ ಮಳೆಯಿಂದಾಗಿ ನಾವುಂದ ಬಡಾಕೆರೆ ಸಾಲ್ಬುಡ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಸುಮಾರು 80ಕ್ಕೂ ಅಧಿಕ ಮನೆಗಳಿಗೆ ಜಲದಿಗ್ಬಂದನಕ್ಕೆ ಒಳಗಾಗಿದ್ದವು.ಜನರ ಕಷ್ಟವನ್ನು ಅರಿತ ಸಮೃದ್ಧ ಜನಾ ಸೇವಾ ಟ್ರಸ್ಟ್ ಬೈಂದೂರು ವತಿಯಿಂದ ಊಟದ ಪ್ಯಾಕೆಟ್ ಮತ್ತು ನೀರಿನ ಬಾಟಲಿಗಳನ್ನು ದೋಣಿಯಲ್ಲಿ ತೆರಳಿ ವಿತರಿಸಲಾಯಿತು.ಟ್ರಸ್ಟ್ ನ ಐವತ್ತಕ್ಕೂ ಹೆಚ್ಚಿನ ಸದಸ್ಯರು ಸ್ವಯಂ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿದ್ದರು.ತುರ್ತು ಕಾರ್ಯದ ನಿಮಿತ್ತ ಬೆಂಗಳೂರು ಪ್ರವಾಸದಲ್ಲಿದ್ದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನೆರೆ ಭೀತಿಯ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ […]