ಸಂಸದ ಕೋಟ ಶ್ರೀನಿವಾಸ ಪೂಜಾರಿ ತಾಯಿ ನಿಧನ
ಕುಂದಾಪುರ:ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ,ಮಾಜಿಸಚಿವ ಕೋಟ ಶ್ರೀನಿವಾಸಪೂಜಾರಿ ಅವರ ಮಾತೃಶ್ರೀ ಕೋಟತಟ್ಟು ಬಾರಿಕೆರೆ ನಿವಾಸಿ ಲಚ್ಚಿ ಪೂಜಾರಿ (97) ಭಾನುವಾರ ನಿಧನ ಹೊಂದಿದರು.ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಅವರು ಉತ್ತಮ ಕೃಷಿಕರಾಗಿದ್ದರು.ಪೂಜಾರಿ ಅವರು ತನ್ನ ರಾಜಕೀಯ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವಪ್ರತಿ ಸಂದರ್ಭ ತಾಯಿ ವಾಸವಿರುವ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು.ಚುನಾವಣೆಯಲ್ಲೂ ತಾಯಿಯೊಂದಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದರು.ಗಣ್ಯರ ಸಂತಾಪ:ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶಪಾಲ್ಸುವರ್ಣ, ಕಾಪು ಶಾಸಕ ಗುರ್ಮೆ […]