ಕೆರ್ಗಾಲ್ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ ವಿಜಯದಶಮಿ ಸಂಭ್ರಮೋತ್ಸವ
ಕುಂದಾಪುರ:ಬೈಂದೂರ ತಾಲೂಕಿನ ಕೆರ್ಗಾಲ್ ನಾಯ್ಕನಕಟ್ಟೆ ಬನಗಲ್ ಹಾಡಿ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ ವಿಜಯದಶಮಿ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶನಿವಾರ ನಡೆಯಿತು.ವೇದ ಮೂರ್ತಿ ಕೊರ್ಗಿ ನಾಗೇಶ್ವರ ಮಂಜರು ಮತ್ತು ರಾಘವೇಂದ್ರ ಕಾರಂತರ ಅವರ ಆಚಾರ್ಯತ್ವದಲ್ಲಿಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿ ಸನ್ನಿಧಾನದಲ್ಲಿ ಚಂಡಿಕಾ ಹೋಮ,ದುರ್ಗಾಹೋಮ,ಮಹಾಮಂಗಳಾರತಿ,ಹಣ್ಣುಕಾಯಿ ಸೇವೆ,ಅನ್ನದಾನ ಸೇವೆ ಜರುಗಿತು.ಭಕ್ತಾದಿಗಳು,ಗ್ರಾಮಸ್ಥರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವಿಯ ಪ್ರಾಸದವನ್ನು ಸ್ವೀಕರಿಸಿದರು.ಮಕ್ಕಳು,ಪುರುಷರು ಮತ್ತು ಮಹಿಳೆಯರಿಗಾಗಿ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮ ಜರುಗಿತು.ದೇವಸ್ಥಾನದ ಅಧ್ಯಕ್ಷರಾದ ಉದ್ಯಮಿ […]