ಕನಕಾಂಗಿ ಶೆಟ್ಟಿ ಕುದ್ರುಕೋಡು

ಕುಂದಾಪುರ:ಹೋಟೆಲ್ ಜುವೇಲ್ ಪಾರ್ಕ್ ಹೆಮ್ಮಾಡಿ (ಕನಕ ಗ್ರೂಪ್) ಉದ್ಯಮಿ ಜಗದೀಶ್ ಶೆಟ್ಟಿ ಕುದ್ರುಕೋಡು ಅವರ ತಾಯಿ ನಾವುಂದ ಗ್ರಾಮದ ಕುದ್ರುಕೋಡು ನಿವಾಸಿ ದೊಡ್ಡಮ್ಮನೆ ಕನಕಾಂಗಿ ಶೆಟ್ಟಿ ಕುದ್ರುಕೋಡು (97) ಅವರು ತಮ್ಮ ಸ್ವಗ್ರಹದಲ್ಲಿ ಬುಧವಾರ ನಿಧರಾದರು.ಅವರಿಗೆ ಏಳು ಗಂಡು,ಓರ್ವ ಹೆಣ್ಣು ಮಗಳು ಇದ್ದಾರೆ.ಹಿರಿಯ ಕೃಷಿ ಮಹಿಳೆಯಾಗಿದ್ದ ಕನಕಾಂಗಿ ಶೆಟ್ಟಿ ಅವರು ತಮ್ಮ ಇಳಿ ವಯಸ್ಸಿನಲ್ಲಿವೂ ಸಕ್ರಿಯವಾಗಿ ಕೃಷಿ ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಂಡಿದ್ದರು.

ಡಿಸೆಂಬರ್ 09 ರಂದು ನವಚೇತನ ಸಮಾವೇಶ, ಕುಂದಾಪುರ ತಾಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕುಂದಾಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಉಡುಪಿ ವತಿಯಿಂದ ನವಚೇತನ ಸಮಾವೇಶ ಹಾಗೂ ಕುಂದಾಪುರ ತಾಲೂಕು ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಡಿಸೆಂಬರ್.09 ರಂದು ಸೋಮವಾರ ಅಂಬೇಡ್ಕರ್ ಭವನ ಕುಂದಾಪುರದಲ್ಲಿ ನಡೆಯಲಿದೆ.ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು.ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ ಅಧ್ಯಕ್ಷತೆ ವಹಿಸಲಿದ್ದು,ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, […]

ನೀಲಾವರದಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

ಉಡುಪಿ:ನೀಲಾವರದಲ್ಲಿ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.ಸಿಡಿಲಿನ ಹೊಡೆತಕ್ಕೆ ಮನೆ ಗೋಡೆ ಬಿರುಕು ಬಿಟ್ಟಿದೆ.ಮೀಟರ್ ಬೋರ್ಡ್ ಕೆಳಗೆ ಕಳಚಿ ಬಿದ್ದಿದೆ.

You cannot copy content of this page