ಕಾಂಗ್ರೆಸ್ ಪಕ್ಷದ ಮುಖಂಡ ಸೀತಾರಾಮ ಶೆಟ್ಟಿ ಕೇರಿಕೊಡ್ಲು ನಿಧನ

ಕುಂದಾಪುರ-ಕಾಂಗ್ರೆಸ್ ಪಕ್ಷದ ಮುಖಂಡರಾದ ಹೊಸಾಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಕೇರಿಕೊಡ್ಲು ನಿವಾಸಿ ಸೀತಾರಾಮ ಶೆಟ್ಟಿ (65) ಅವರು ಅಲ್ಪಕಾಲಿಕ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.ಅವರು ಪತ್ನಿ,ಪುತ್ರ,ಪುತ್ರಿ ಮತ್ತು ಸಹೋದರ,ಸಹೋದರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಸುದೀರ್ಘ ನಲವತ್ತಕ್ಕೂ ಹೆಚ್ಚಿನ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಸೇವೆ ಸಲ್ಲಿಸಿದ್ದ ಅವರು ಮೂರು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಸಾಮಾಜಿಕ ಹಾಗೂ ಧಾರ್ಮಿಕ ಕೆಲಸದಲ್ಲಿ ತೊಡಗಿ ಕೊಂಡಿದ್ದು ಜನಪ್ರಿಯತೆ ಪಡೆದಿದ್ದರು.ಅಂಬಾ ಕ್ರಿಕೆಟ್ ಕ್ಲಬ್ ತಂಡದ ಸ್ಥಾಪಕ […]

ಕಾಡಾನೆಗಳ ದಾಳಿಗೆ-ಅಡಿಕೆ ಗಿಡ ನಾಶ,ಸಾವಿರಾರು ರೂಪಾಯಿ ನಷ್ಟ

ಮಂಗಳೂರು:ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ ಗಿಡಗಳನ್ನು ನಾಶಪಡಿಸಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ.ಶಿರಾಡಿ ಗ್ರಾಮದ ತೆಕ್ಕನಾಟ್ ನಿವಾಸಿ ಟಿ.ಎ.ತೋಮಸ್ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ನ.24 ರ ಮಧ್ಯರಾತ್ರಿ ಕಾಡಾನೆಗಳ ಗುಂಪು ದಾಳಿ ನಡೆಸಿದ್ದು ೧೦೦ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನಾಶಗೊಳಿಸಿವೆ.ಶಿರಾಡಿ ಗ್ರಾಮದ ಇತರೇ ಕಡೆಯೂ ಕೃಷಿ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿದ್ದು ಅಡಿಕೆ, ಬಾಳೆ ಕೃಷಿ ನಾಶಗೊಳಿಸಿವೆ. ಕಾಡಾನೆಗಳನ್ನು ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮ

ಕುಂದಾಪುರ:ಶ್ರೀ ಗಣೇಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಳ್ಳಿಕಟ್ಟೆ-ಹೊಸಾಡು ಶಾಖೆ ವತಿಯಿಂದ 71ನೇ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮ ದಿ.ಜಿಎಸ್ ಆಚಾರ್ಯ ಸ್ಮಾರಕ ಸಭಾಭವನ ಮುಳ್ಳಿಕಟ್ಟೆಯಲ್ಲಿ ಬುಧವಾರ ನಡೆಯಿತು.ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ ಅವರು ಸಹಕಾರ ಕಾಯಿದೆ,ನಿಯಮಗಳ ಬಗ್ಗೆ ಹಾಗೂ ಸಹಕಾರಿ ಸಪ್ತಾಹ ಆಚರಣೆಯ ಉದ್ದೇಶದ ಕುರಿತು ಮಾಹಿತಿಯನ್ನು ನೀಡಿದರು. ಸಂಘದ ಅಧ್ಯಕ್ಷ ಮುರಳೀಧರ ಐತಾಳ್ ಅಧ್ಯಕ್ಷತೆ ವಹಿಸಿದ್ದರು.ಸಂಘದ ಸಲಹೆಗಾರ ಡಿ.ಎಂ ಕಾರಂತ ಮತ್ತು ಎಲ್ಲಾ ನಿರ್ದೇಶಕರು,ನಿವೃತ್ತ ನೌಕರರ ಸಂಘದ ಅಧ್ಯಕ್ಷ […]

You cannot copy content of this page