ಮಂಗಳೂರಿನಲ್ಲಿ ಭಾರಿ ಮಳೆ,ಕೃತಕ ನೆರೆ ಸೃಷ್ಟಿ,ವ್ಯಾಪಕ ಹಾನಿ‌

ಮಂಗಳೂರು:ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಸೋಮವಾರ ಭಾರಿ ಮಳೆಯಾಗಿದೆ.ಹವಾಮಾನ ವೈಪರಿತ್ಯ ದಿಂದಾಗಿ ಏಕಾಏಕಿ ಸುರಿದ ವರುಣನ ಅಬ್ಬರಕ್ಕೆ ಜಿಲ್ಲೆಯ ಜನತೆ ತತ್ತರಿಸುವಂತಾಗಿದೆ. ಗುಡುಗು,ಸಿಡಿಲು ಸಹಿತ ಮಳೆ ಧಾರಾಕಾರವಾಗಿ ಸುರಿದಿದ್ದು, ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.ಗಾಳಿಮಳೆಗೆ ಹಲವು ಮರಗಳು ಧರೆಗುರುಳಿವೆ.ಮಳೆಯ ಅಬ್ಬರ ಜೋರಿರುವುದರಿಂದ ಡಿ. 3 ರಂದು ಜಿಲ್ಲೆಯಲ್ಲಿ ಶಾಲಾ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಡಳಿತಸೂಚಿಸಿದೆ.ಟಿಪ್ಪು ಸುರತ್ಕಲ್ ಮಾರುಕಟ್ಟೆ ಬಳಿಯ ವೀನಸ್ ಅಸ್ಪತ್ರೆಗೆ ಪ್ರವೇಶಿಸಿದ‌ ನೆರೆ ನೀರಿನಿಂದಾಗಿ,ರೋಗಿಗಳ ಪರದಾಟ ಮಾಡುವಂತ್ತಾಯಿತು.

ಸಾಂಪ್ರದಾಯಿಕ ಶೈಲಿಯಲ್ಲಿ ತಿರಿ ನಿರ್ಮಾಣ,ಖುಷಿಯಲ್ಲಿ ಸಂಭ್ರಮಿಸಿದ ಕುಟುಂಬಿಕರು

ಕುಂದಾಪುರ: ಕೃಷಿಕರಾದ ನಾವುಂದ ಕಾರಂತರ ಹಿತ್ತಲು ಸೂರ ಪೂಜಾರಿಯವರ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಭತ್ತವನ್ನು ಶೇಕರಿಸಿಡುವ ಕುಂದಾಪುರದ ಆಡು ಭಾಷೆಯಲ್ಲಿ ಹೇಳುವಂತಹ ತಿರಿ ಯನ್ನು ತಯಾರಿಸಿದ್ದು ನೋಡುಗರ ಮನ ಸೆಳೆಯುವಂತೆ ಇದೆ.ಹುಲ್ಲಿನಿಂದ ಮಾಡಿದ ಹಗ್ಗ ಅಂದರೆ ಮಡಿ ಬಳ್ಳಿ ಮತ್ತು ಒಂದಷ್ಟು ಭತ್ತದ ಒಣಗಿದ ಹುಲ್ಲು ಇತ್ಯಾದಿಗಳಿಂದ ಸಾಂಪ್ರದಾಯಕ ಶೈಲಿಯಲ್ಲಿ ತಿರಿವೊಂದನ್ನು ಅತ್ಯಂತ ಸುಂದರ ಮತ್ತು ಚಂದವಾಗಿ ರಚಿಸಲಾಗಿದೆ.ಈ ಹಿಂದೆ ಕರಾವಳಿ ಭಾಗದಲ್ಲಿ ಪ್ರತಿ ರೈತರ ಮನೆಯ ಅಂಗಳದಲ್ಲಿ ಇಂತಹ ತಿರಿಯನ್ನು ರಚಿಸಲಾಗುತ್ತಿತ್ತು.ಬದಲಾದ ಕಾಲ ಮಾನದಲ್ಲಿ ಮರೆಯಾಗುತ್ತಿರುವ […]

ನದಿಯಲ್ಲಿ ಈಜಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೆಳ್ವೆ ಸಮೀಪದ ಗೊಮ್ಮೋಲ್ಚರ್ಚ್ ಹಿಂಭಾಗದಿಂದಒಳ್ಳೆ ಹೊಂಡ ಕಜ್ಕೆ ಸಂತೆಕಟ್ಟೆ ಸಂಪರ್ಕದ ಒಳ್ಳೆ ಹೊಂಡ ಬಳಿಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಮಧ್ಯಾಹ್ನದ ಸಮಯ ಈಜಲು ಹೋದ ಗುಮೊಲ ನಿವಾಸಿ ಜಯಂತ ನಾಯ್ಕ್ ಹಾಗೂ ಬೆಳ್ವೆ ಶ್ರೀಶ ಆಚಾರ್ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ದಾರುಣ ಘಟನೆ ಭಾನುವಾರ ನಡೆದಿದೆ.ಯುವಕರಿಬ್ಬರ ಮೃತ ದೇಹವನ್ನು ಮೇಲಕ್ಕೆ ಎತ್ತಲಾಗಿದೆ.ಕಳೆದ ವಾರ ಮಂಗಳೂರು ಜಿಲ್ಲೆಯಲ್ಲಿ ಮೂವರೂ ಯುವಕರು ನದಿಗೆ ಈಜಲು ಹೋಗಿ ಅಣೆಕಟ್ಟು ಬಳಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.ಅವಿಭಜಿತ ದ.ಕ ಜಿಲ್ಲೆಯಲ್ಲಿ ಪದೇ ಪದೇ ಇಂತಹ […]

You cannot copy content of this page