ಸಾಮಾಜಿಕ ಕಳಕಳಿ ಮನೋಭಾವ ಹೊಂದಿರುವ ವ್ಯಕ್ತಿ ದಿ.ಎನ್.ಎ ಪೂಜಾರಿ ಅವರ ಕಾರ್ಯ ಸ್ಮರಣೀಯ
ಬೈಂದೂರು:ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರನ್ನು ಗಳಿಸಿರುವ ಹಿರಿಯರಾದ ದಿ.ನಾರಾಯಣ ಅನಂತ ಪೂಜಾರಿ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಕೆರ್ಗಾಲು ರಾಧಾಕೃಷ್ಣ ಸಭಾಭವನದಲ್ಲಿ ಭಾನುವಾರ ನಡೆಯಿತು.ದಿ.ನಾರಾಯಣ ಪೂಜಾರಿ ಅವರನ್ನು ಊರಿನ ಜನರು ಎನ್.ಎ ಪೂಜಾರಿ ಎಂದೆ ಕರೆಯುತ್ತಾರೆ.ಅತ್ಯಂತ ಕಡು ಬಡತನದಲ್ಲಿ ಹುಟ್ಟಿದ ಎನ್.ಎ ಪೂಜಾರಿ ಅವರು ಸ್ವಂತ ಪರಿಶ್ರಮದ ಮೂಲಕ ಮುಂಬೈನಲ್ಲಿ ರಾತ್ರಿ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಸ್ನೇಹಿತರ ಜತೆಗೆ ವಿದೇಶಕ್ಕೆ ತೆರಳಿದ ಅವರು ಪೆಟ್ರೋಲಿಯಂ ಘಟಕದಲ್ಲಿ ಇಂಜಿನಿಯರ್ ಆಗಿ ಕೆಲಸವನ್ನು ಪಡೆದು ಜೀವನವನ್ನು ಕಟ್ಟಿಕೊಳ್ಳುವುದರ ಮೂಲಕ […]