ಮಂಡಾಡಿ ಹೋರ್ವರಮನೆ ಸಾಂಪ್ರದಾಯಿಕ ಕಂಬಳ ಮಹೋತ್ಸವ ಸಂಪನ್ನ

ಕುಂದಾಪುರ:ಮಂಡಾಡಿ ಹೋರ್ವರಮನೆಯ ಹದಿನೇಳನೆ ವರ್ಷದ ಕಂಬಳೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.ಮಂಡಾಡಿ ಹೋರ್ವರಮನೆ ಸಾಂಪ್ರದಾಯಿಕ ಕಂಬಳೋತ್ಸವದಲ್ಲಿ ಕುಂದಾಪುರ,ಬೈಂದೂರು,ಭಟ್ಕಳ,ಉಡುಪಿ,ಕಾರ್ಕಳ ಭಾಗದ ಸುಮಾರು ಐವತ್ತಕ್ಕೂ ಅಧಿಕ ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.ಕನೆಹಲಗೆ ವಿಭಾಗ,ಹಗ್ಗ ಹಿರಿಯ ವಿಭಾಗ,ಹಗ್ಗ ಕಿರಿಯ ವಿಭಾಗ,ಸಬ್ ಜ್ಯೂನಿಯರ್ ವಿಭಾಗ,ಕೆಸರು ಗದ್ದೆ ಓಟ ನಡೆಯಿತು.ವಿಜೇತ ಕೋಣಗಳ ಮಾಲೀಕರಿಗೆ ಹಾಗೂ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪಧಾಳುಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಹೋರ್ವರ ಮನೆ ಕಂಬಳೋತ್ಸವದಲ್ಲಿ ಭಾಗವಹಿಸಿದ ಕೋಣಗಳ ತಂಡಕ್ಕೆ ಗೌರವಧನವನ್ನು ನೀಡಲಾಯಿತು.ಹಗಲು,ಇರುಳು ನಡೆದ ಕಂಬಳೋತ್ಸವ ಕಾರ್ಯಕ್ರಮದಲ್ಲಿ […]

ಡಿಸೆಂಬರ್.14 ರಂದು ಬಡಾಕೆರೆ ಶಾಲೆ ಸ್ನೇಹ ಸಮ್ಮಿಲನ,ಶಾಲಾ ವಾರ್ಷಿಕೋತ್ಸವ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಉತ್ತರ) ಬಡಾಕೆರೆಯಲ್ಲಿ ಡಿಸೆಂಬರ್ 14.ರಂದು ಸ್ನೇಹ ಸಮ್ಮಿಲನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.ಸ್ನೇಹ ಸಮ್ಮಿಲನ ಹಾಗೂ ಶಾಲಾ ವಾರ್ಷಿಕೋತ್ಸವ ಅಂಗವಾಗಿ ಬೆಳಿಗ್ಗೆ 11 ರಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ನೃತ್ಯ ತಂಡದಿಂದ ನೃತ್ಯ ವೈಭವ,12.30 ರಿಂದ 1.30 ರ ತನಕ ಗುರು ವಂದನಾ ಕಾರ್ಯಕ್ರಮ,2.30 ರಿಂದ ವಿವಿಧ ಶಾಲಾ ಮಕ್ಕಳಿಂದ ನಾಟ್ಯ ವೈಭವ,ನೃತ್ಯ ಸ್ಪರ್ಧಾ ಕಾರ್ಯಕ್ರಮ.4.30 ರಿಂದ 5.30 ರ ತನಕ ಶಾಲಾ ಶಿಕ್ಷಕಿಯರು ಹಾಗೂ ಹಳೆ […]

ಧನ್ವಿ ಪೂಜಾರಿ ಮರವಂತೆಗೆ ಚಿನ್ನದ ಪದಕ

ಕುಂದಾಪುರ:ವರ್ಷಿಣಿ ಯೋಗ ಎಜ್ಯುಕೇಶನ್ ಆಂಡ್ ಕಲ್ಚರಲ್ ಸ್ಪೋಟ್ರ್ಸ್ ಟ್ರಸ್ಟ್ ಶಿವಮೊಗ್ಗ ವತಿಯಿಂದ ಥಾಯ್ಲೆಂಡ್‍ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಮ್ಮಾಡಿ ಜನತಾ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಧನ್ವಿ ಪೂಜಾರಿ ಮರವಂತೆ ಭಾರತ ದಿಂದ ಪ್ರತಿನಿಧಿಸಿ ಚಿನ್ನದ ಪದಕ ಗಳಿಸಿದ್ದಾರೆ.ವಿದ್ಯಾರ್ಥಿ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಿನ್ಸಿಪಾಲ್,ಬೋಧಕ ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

You cannot copy content of this page