ಕಮಲ್ ಫ್ಯೂಲ್ಸ್ ಅರಾಟೆಯಲ್ಲಿ ಶುಭಾರಂಭ
ಕುಂದಾಪುರ:ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಜನಪ್ರೀಯ ಎಚ್.ಪಿ ಫ್ಯೂಲ್ಸ್ ನ ಘಟಕ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿರುವುದರಿಂದ ಪರಿಸರದ ಜನರಿಗೆ ಉತ್ತಮ ದರ್ಜೆ ತೈಲ ಸಿಗುವಂತಾಗಲಿದೆ ಎಂದು ಎಚ್.ಪಿ.ಸಿ.ಎಲ್ ಜೋನ್ ಹೆಡ್ ಮಂಗಳೂರು ನವಿನ್ ಕುಮಾರ್ ಹೇಳಿದರು.ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಅರಾಟೆ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಮಲ್ ಫ್ಯೂಲ್ಸ್‍ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿರಾ ಶೆಟ್ಟಿ ಗುಲ್ವಾಡಿ ದೊಡ್ಮಮನೆ ಮತ್ತು ಗುಲಾಬಿ ಶೆಟ್ಟಿ ಮೊವಾಡಿ ಉದ್ರಿ […]