ಬಂಟ್ವಾಡಿ ಶಾಲೆ ಅಮೃತ ಮಹೋತ್ಸವ ಸಮಾರೋಪ ಸಮಾರಂಭ

ಕುಂದಾಪುರ:ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳನ್ನು ಉನ್ನತೀಕರಣಗೊಳಿಸುವುದರ ಜತೆಗೆ ಉಳಿಸಿ ಬೆಳೆಸುವಂತಹ ಕೆಲಸ ಆದಾಗ ಮಾತ್ರ ತಮ್ಮೂರಿನಲ್ಲೆ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಉದ್ಯಮಿ ಅಭಿನಂದನ್ ಶೆಟ್ಟಿ ಹೇಳಿದರು.ಬೈಂದೂರು ವಲಯದ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಬಂಟ್ವಾಡಿ ಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಅಮೃತ ಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.ಸನ್ಮಾನಗಳು ಅಭಿನಂದನೆಗಳು ನಮ್ಮಮೇಲಿರುವ ಜವಾಬ್ದಾರಿ ಕೆಲಸಗಳು ಜಾಗೃತಗೊಳ್ಳುವಂತೆ ಮಾಡುತ್ತವೆ.ಇನ್ನಷ್ಟು ಕೆಲಸಗಳನ್ನು ಮಾಡಲು ಪ್ರೇರಣೆ ನೀಡುವಂತಹದ್ದು ಆಗಿರುತ್ತದೆ […]

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ:ಸುಸಾನ್ ಆಚಾರ್,ಸುದೀಪ್ತಿಗೆ ಆಚಾರ್ ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಮಂಕಿ ಶಾಲೆ ವಿದ್ಯಾರ್ಥಿಗಳಾದ ಸುಸಾನ್ ಆಚಾರ್ ಮತ್ತು ಸುದೀಪ್ತಿ ಆಚಾರ್ ಪ್ರಥಮ ಸ್ಥಾನ ಪಡೆದಿದ್ದಾರೆ.ಇವರು ಸುಬ್ರಹ್ಮಣ್ಯ ಆಚಾರ್ ಮತ್ತು ಜ್ಯೋತಿ ದಂಪತಿಯ ಮಕ್ಕಳು.

ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆ ಶತಮಾನೋತ್ಸವ ಸಂಭ್ರಮ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಶನಿವಾರ ನಡೆಯಿತು.ನೂತನ ರಂಗ ಮಂದಿರ ಉದ್ಘಾಟನೆಯನ್ನು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.ಬೆಳಗೆ ಧ್ವಜರೋಹಣವನ್ನು ಗೋಳಿಹೊಳೆ ಪಂಚಾಯಿತಿ ಅಧ್ಯಕ್ಷ ವಸಂತ ಹೆಗ್ಡೆ ನೆರವೇರಿಸಿದರು.ನಾನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ದಾನಿಗಳನ್ನು ಗೌರವಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.ನೃತ್ಯ ವೈವಿಧ್ಯ,ಶಿವಭೂತಿ ನಾಟಕ ಹಾಗೂ ಆಟಗಾರ ನಗೆ ನಾಟಕ ನಡೆಯಿತು.ಸಾವಿರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಗುರುವಂದನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭ ಕಾರ್ಯ ಜರುಗಿತು.ನಾಡೋಜ ಎಸ್ […]

You cannot copy content of this page