ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ:ಗಣರಾಜ್ಯೋತ್ಸವ ಸಂಭ್ರಮಾಚರಣೆ

ಕುಂದಾಪುರ:ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.ಗಂಗೊಳ್ಳಿ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಧ್ವಜಾರೋಹಣ ಗೈದು ಮಾತನಾಡಿ, ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಅಧ್ಯಕ್ಷತೆ ವಹಿಸಿದ್ದರು. ಕ್ರೆಸೆನ್ಸ್,ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆಯ ಸಮೂಹ ಗಾಯನ, ನೃತ್ಯ ಕಾರ್ಯಕ್ರಮ ಜರುಗಿತು. ಹತ್ತನೇ ತರಗತಿ ವಿದ್ಯಾರ್ಥಿನಿ ಶ್ರೀನಿಧಿ ಖಾರ್ವಿ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ರೀತೇಶ್ ವಂದಿಸಿದರು.

ಶಿಕ್ಷಕ ಉದಯ ಕುಮಾರ್ ಶೆಟ್ಟಿಗೆ ರಾಜ್ಯಪಾಲರಿಂದ ಪುರಸ್ಕಾರ

ಕುಂದಾಪುರ:ಕರ್ನಾಟ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನ ಟೌನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಬೈಂದೂರು ವಲಯದ ಆಲೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಉದಯ ಕುಮಾರ್ ಶೆಟ್ಟಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಮತದಾರ ಸಾಕ್ಷರತಾ ಕ್ಲಬ್ ಸಂಚಾಲಕ ಪುರಸ್ಕಾರವನ್ನು ನೀಡಿ ಗೌರವಿಸಿದರು.ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ ಮೀನಾ,ಬಿ.ಬಿ.ಎಂ.ಪಿ ಆಯುಕ್ತ ತುಷಾರ ಗಿರಿನಾಥ್ ಉಪಸ್ಥಿತರಿದ್ದರು.

ಮಹಿಳಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಮಲಾಕ್ಷಿ ಖಾರ್ವಿ ಆಯ್ಕೆ

ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ ಮರವಂತೆ ಅದರ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಆಯ್ಕೆ ಅವಿರೋಧವಾಗಿ ನಡೆದಿದೆ.ಸಂಘದ ಅಧ್ಯಕ್ಷರಾಗಿ ಕಮಲಾಕ್ಷಿ ಖಾರ್ವಿ ಹಾಗೂ ಉಪಾಧ್ಯಕ್ಷರಾಗಿ ವನಿತಾ ಖಾರ್ವಿ ಆಯ್ಕೆಯಾಗಿದ್ದಾರೆ.ಆಶಾ ಪೂಜಾರಿ ನಾವುಂದ,ಪೂರ್ಣಿಮಾ ಮೊಗವೀರ ನಾವುಂದ,ಸವಿತಾ ಖಾರ್ವಿ ಮರವಂತೆ,ನಾಗರತ್ನ ಖಾರ್ವಿ ಮರವಂತೆ,ನೇತ್ರಾವತಿ ಪೂಜಾರಿ ನಾವುಂದ,ಶೈಲಜಾ ಖಾರ್ವಿ ಮರವಂತೆ,ವಿಜಯದಾಸ್ ಮರವಂತೆ,ಸುಜಾತ ಪೂಜಾರಿ ನಾವುಂದ,ನಬೀಸಾ ನಾವುಂದ ಆಯ್ಕೆಯಾಗಿದ್ದಾರೆ.ಚುನಾವಣಾ ಅಧಿಕಾರಿಯಾಗಿ ಕೃಷಿ ಅಧಿಕಾರಿ ಗಾಯಿತ್ರಿ ದೇವಿ ಎಸ್ ಭಾಗವಹಿಸಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಉಪಸ್ಥಿತರಿದ್ದರು.

You cannot copy content of this page