ಆಯುಷ್ ಖಾರ್ವಿ ಗೆ ಚಾಂಪಿಯನ್ ಪ್ರಶಸ್ತಿ

ಕುಂದಾಪುರ:ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಷನ್ ನಲ್ಲಿ ಆಯುಷ್ ಜಿ ಖಾರ್ವಿ ಚ್ಯಾಂಪಿಯನ್ ಆಫ್ ಚ್ಯಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ.ಗಂಗೊಳ್ಳಿ ದಾಕುಹಿತ್ಲು ಗಣಪತಿ ಲತಾ ದಂಪತಿಗಳ ಪುತ್ರ.ಗಂಗೊಳ್ಳಿ ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 3ನೇ ತರಗತಿ ವಿದ್ಯಾರ್ಥಿ.

ಪ್ರತಿಭಾ ಪುರಸ್ಕಾರ ವಿತರಣೆ,ಸನ್ಮಾನ ಕಾರ್ಯಕ್ರಮ

ಕುಂದಾಪುರ:ಗುಜ್ಜಾಡಿ ಗ್ರಾಮದ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ,ವಿದ್ಯಾರ್ಥಿವೇತನ ಮತ್ತು ಸನ್ಮಾನ ಕಾರ್ಯಕ್ರಮ ಮಂಗಳವಾರ ನಡೆಯಿತು.ನಾಡ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಿಕ್ಕಮ್ಮರಿ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ನನಗೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯ ವೃತ್ತಿ ಮಾಡಲು ಅವಕಾಶ ಸಿಕ್ಕಿರುವುದು ಅದೃಷ್ಟವಾಗಿದೆ.ನಿಷ್ಠೆಯಿಂದ ಪ್ರಮಾನಿಕತೆಯಿಂದ ಕೆಲಸ ಮಾಡಿದರೆ ಮಾತ್ರ ಜನರ ಪ್ರೀತಿಗಳಿಸಲು ಸಾಧ್ಯವಿದೆ ಎಂದು ಹೇಳಿದರು.ದೈವಸ್ಥಾನದ ಅಧ್ಯಕ್ಷರಾದ ಬಾಬು.ಜೆ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಎಸ್.ಕೆ ಪೂಜಾರಿ,ಕಾರ್ಯದರ್ಶಿ ನರಸಿಂಹ ಪೂಜಾರಿ […]

ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಸೇವೆ

ಕುಂದಾಪುರ:ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಸೇವೆ ಮತ್ತು ಗೆಂಡ ಸೇವೆ ಹಾಗೂ ಏಳನೇ ವರ್ಷದ ವಾರ್ಷಿಕ ಪ್ರತಿμÁ್ಠ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅದ್ದೂರಿಯಾಗಿ ಮಂಗಳವಾರ ನಡೆಯಿತು.ವಾರ್ಷಿಕ ಹಾಲು ಹಬ್ಬ ಅಂಗವಾಗಿ ಶ್ರೀ ದೇವರಿಗೆ ಹಣ್ಣು ಕಾಯಿ ಮಹಾಪೂಜೆ ಅನ್ನಸಂತರ್ಪಣೆ ದರ್ಶನ ಸೇವೆ ಗೆಂಡಸೇವೆ, ತುಲಾಭಾರ ಸೇವೆ ಜರುಗಿತು.ಪರಿವಾರ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಯಕ್ಷಗಾನ ಬಯಲಾಟ,ದಾನಿಗಳಿಗೆ ಸನ್ಮಾನ,ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಿತು.ದೈವಸ್ಥಾನದ […]

You cannot copy content of this page