ಮಹಿಳಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಮಲಾಕ್ಷಿ ಖಾರ್ವಿ ಆಯ್ಕೆ

ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ ಮರವಂತೆ ಅದರ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಆಯ್ಕೆ ಅವಿರೋಧವಾಗಿ ನಡೆದಿದೆ.ಸಂಘದ ಅಧ್ಯಕ್ಷರಾಗಿ ಕಮಲಾಕ್ಷಿ ಖಾರ್ವಿ ಹಾಗೂ ಉಪಾಧ್ಯಕ್ಷರಾಗಿ ವನಿತಾ ಖಾರ್ವಿ ಆಯ್ಕೆಯಾಗಿದ್ದಾರೆ.ಆಶಾ ಪೂಜಾರಿ ನಾವುಂದ,ಪೂರ್ಣಿಮಾ ಮೊಗವೀರ ನಾವುಂದ,ಸವಿತಾ ಖಾರ್ವಿ ಮರವಂತೆ,ನಾಗರತ್ನ ಖಾರ್ವಿ ಮರವಂತೆ,ನೇತ್ರಾವತಿ ಪೂಜಾರಿ ನಾವುಂದ,ಶೈಲಜಾ ಖಾರ್ವಿ ಮರವಂತೆ,ವಿಜಯದಾಸ್ ಮರವಂತೆ,ಸುಜಾತ ಪೂಜಾರಿ ನಾವುಂದ,ನಬೀಸಾ ನಾವುಂದ ಆಯ್ಕೆಯಾಗಿದ್ದಾರೆ.ಚುನಾವಣಾ ಅಧಿಕಾರಿಯಾಗಿ ಕೃಷಿ ಅಧಿಕಾರಿ ಗಾಯಿತ್ರಿ ದೇವಿ ಎಸ್ ಭಾಗವಹಿಸಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಉಪಸ್ಥಿತರಿದ್ದರು.

ಬಂಟ್ವಾಡಿ ಶಾಲೆ ಅಮೃತ ಮಹೋತ್ಸವ ಸಮಾರೋಪ ಸಮಾರಂಭ

ಕುಂದಾಪುರ:ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳನ್ನು ಉನ್ನತೀಕರಣಗೊಳಿಸುವುದರ ಜತೆಗೆ ಉಳಿಸಿ ಬೆಳೆಸುವಂತಹ ಕೆಲಸ ಆದಾಗ ಮಾತ್ರ ತಮ್ಮೂರಿನಲ್ಲೆ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಉದ್ಯಮಿ ಅಭಿನಂದನ್ ಶೆಟ್ಟಿ ಹೇಳಿದರು.ಬೈಂದೂರು ವಲಯದ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಬಂಟ್ವಾಡಿ ಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಅಮೃತ ಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.ಸನ್ಮಾನಗಳು ಅಭಿನಂದನೆಗಳು ನಮ್ಮಮೇಲಿರುವ ಜವಾಬ್ದಾರಿ ಕೆಲಸಗಳು ಜಾಗೃತಗೊಳ್ಳುವಂತೆ ಮಾಡುತ್ತವೆ.ಇನ್ನಷ್ಟು ಕೆಲಸಗಳನ್ನು ಮಾಡಲು ಪ್ರೇರಣೆ ನೀಡುವಂತಹದ್ದು ಆಗಿರುತ್ತದೆ […]

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ:ಸುಸಾನ್ ಆಚಾರ್,ಸುದೀಪ್ತಿಗೆ ಆಚಾರ್ ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಮಂಕಿ ಶಾಲೆ ವಿದ್ಯಾರ್ಥಿಗಳಾದ ಸುಸಾನ್ ಆಚಾರ್ ಮತ್ತು ಸುದೀಪ್ತಿ ಆಚಾರ್ ಪ್ರಥಮ ಸ್ಥಾನ ಪಡೆದಿದ್ದಾರೆ.ಇವರು ಸುಬ್ರಹ್ಮಣ್ಯ ಆಚಾರ್ ಮತ್ತು ಜ್ಯೋತಿ ದಂಪತಿಯ ಮಕ್ಕಳು.

You cannot copy content of this page