ರಾಜ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಸುರೇಂದ್ರ ಗುಡ್ಡೆ ಹೋಟೆಲ್ ನಾಡ ಆಯ್ಕೆ

ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ( ರಿ) ಬೆಂಗಳೂರು.ಇದರಲ್ಲಿ ಸದಸ್ಯರಾಗಿದ್ದು ಹಾಗೂ ಸಂಘದಲ್ಲಿ ಸದಾ ಕ್ರಿಯಾಶೀಲರಾಗಿ ತಮ್ಮ ರಾಜ್ಯ ಮತ್ತು ರಾಷ್ಟ್ರಮಟ್ಟದ ಚಟುವಟಿಕೆಗಳ ಮೂಲಕ ಮಾದರಿಯಾಗಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಸೇನಾಪುರದ ಶ್ರೀ ಸುರೇಂದ್ರ ಗುಡ್ಡೆ ಹೋಟೆಲ್ ನಾಡ.ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅರೆ ಸರ್ಕಾರಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾದ ಶ್ರೀ ವಿಶ್ವನಾಥ್ ಧುಮಾಳ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಸರಿಕಾರ್,ಶ್ರೀ […]

ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಗದೀಶ ಪಿ.ಪೂಜಾರಿ ಹಕ್ಕಾಡಿ ಹಾಗೂ ಉಪಾಧ್ಯಕ್ಷರಾಗಿ ಸತೀಶ ಕುಮಾರ್ ಶೆಟ್ಟಿ ಆಯ್ಕೆ

ಕುಂದಾಪುರ:ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅದರ ಪ್ರಧಾನ ಕಚೇರಿಯಲ್ಲಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ಗುರುವಾರ ನಡೆಯಿತು. ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗದೀಶ ಪಿ.ಪೂಜಾರಿ ಹಕ್ಕಾಡಿ ಹಾಗೂ ಉಪಾಧ್ಯಕ್ಷರಾಗಿ ಸತೀಶ ಕುಮಾರ್ ಶೆಟ್ಟಿ ಆಯ್ಕೆಯಾಗಿದರು.ಅಧ್ಯಕ್ಷ ಜಗದೀಶ ಪಿ.ಪೂಜಾರಿ ಹಕ್ಕಾಡಿ ಮಾತನಾಡಿ,ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಅರೆಹೊಳೆ ಕುದ್ರುಕೋಡು ಮಧ್ಯ ಭಾಗದಲ್ಲಿ ನಮ್ಮ ಸಂಘದ ವತಿಯಿಂದ ರೇಷನ್ ಅಂಗಡಿಯನ್ನು ತೆರೆಯುವ ಉದ್ದೇಶವನ್ನು […]

ಉಪ್ಪುಂದ:ಶ್ರೀ ಉಮಾಮಹೇಶ್ವರ ದೇವರ ಪುನರ್ ಪ್ರತಿಷ್ಠೆ,ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮ

ಕುಂದಾಪುರ:ಬೈಂದೂರು ಪರಿಸರದಲ್ಲಿ ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶಿಲಾಮಯ ಮಂದಿರ ಲೋಕಾರ್ಪಣೆ,ಶ್ರೀ ಉಮಾಮಹೇಶ್ವರ,ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ರಾಜಗೋಪುರ ಸಮರ್ಪಣೆ ಹಾಗೂ ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮ ಫೆಬ್ರವರಿ ಪ್ರಾರಂಭವಾಗಿ 21 ರಿಂದ ಫೆಬ್ರವರಿ 27 ರ ಗುರುವಾರದ ತನಕ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.ಅವಿಭಾಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಪರಿಸರದಲ್ಲಿ ಕೆಲವು ಪ್ರತಿಷ್ಠಿತ ಬಂಟ ಕುಟುಂಬಗಳ ಮೂಲ ಸ್ಥಾನವೆನಿಸಿದ ಮಾದಯ್ಯ ಶೆಟ್ರಮನೆಗೆ ಇರುವ […]

You cannot copy content of this page