ಶ್ರೀ ಸ್ವಾಮಿಲಿಂಗ ಮರ್ಲುಚಿಕ್ಕು ಶೂಲದ ಹಾೈಗುಳಿ ಪರಿವಾರ ದೈವಗಳ ಸಿರಿ ಸಿಂಗಾರ ಕೋಲ,ವಾರ್ಷಿಕ ಮಹೋತ್ಸವ ಆಚರಣೆ
ಕುಂದಾಪುರ:ಹೊಸಾಡು ಗ್ರಾಮದ ಮಂಕಿ-ಒಳನಾಡುಶ್ರೀ ಸ್ವಾಮಿಲಿಂಗ ಮರ್ಲುಚಿಕ್ಕು ಶೂಲದ ಹಾೈಗುಳಿ ಹಾಗೂ ಸಪರಿವಾರ ದೇವರ ಸಿರಿ ಸಿಂಗಾರ ಕೋಲ ಮತ್ತು ವಾರ್ಷಿಕ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಶ್ರೀ ದೇವರ ಸಿರಿ ಸಿಂಗಾರ ಕೋಲ ಮತ್ತು ವಾರ್ಷಿಕ ಮಹೋತ್ಸವ ಅಂಗವಾಗಿ ಶ್ರೀ ಶ್ರೀ ನಾಗ ಪೂಜೆ,ಮಹಾ ಮಂಗಳಾರತಿ,ನೇಮೋತ್ಸವ, ಪ್ರಸಾದ ವಿತರಣೆ,ಅನ್ನದಾನ ಸೇವೆ ಜರುಗಿತು. ದೇವಸ್ಥಾನದ ಮೊಕ್ತೇಸರರಾದ ಕೃಷ್ಣ ಚೆಂದನ್ ಮಾತನಾಡಿ,ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಕೋಲ ನೇಮೋತ್ಸವವನ್ನು ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ.ಅರ್ಜಿಣ ಅವಸ್ಥೆಯಲ್ಲಿದ್ದ […]