ಶ್ರೀಲಕ್ಷ್ಮೀ ಜನಾರ್ಧನ ದೇವರಿಗೆ ಕರ್ಪೂರ ಸೇವೆ ಸಮರ್ಪಣೆ

ಕುಂದಾಪುರ:ಬೈಂದೂರು ತಾಲೂಕಿನ ಬಡಾಕೆರೆ ಶ್ರೀಲಕ್ಷ್ಮೀ ಜರ್ನಾಧನ ದೇವರ ರಥೋತ್ಸವ ಅಂಗವಾಗಿ ಓಕುಳಿ ಉತ್ಸವ ಹಾಗೂ ಶ್ರೀದೇವರ ಕರ್ಪೂರ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.ಶ್ರೀಲಕ್ಷ್ಮೀ ಜನಾರ್ಧನ ದೇವರ ಸನ್ನಿಧಾನದಲ್ಲಿ ವಾರ್ಷಿಕವಾಗಿ ನಡೆಯುವ ಕರ್ಪೂರ ಸೇವೆ ಕಾರ್ಯಕ್ರಮದಲ್ಲಿ ಭಕ್ತರು ಭಾಗಿ ತಮ್ಮ ಹರಕೆಯನ್ನು ಸಲ್ಲಿಸಿದರು.ಕರ್ನಾಟಕ ರಾಜ್ಯದಲ್ಲೆ ಅತಿ ಹೆಚ್ಚು ಕರ್ಪೂರ ಸೇವೆ ಬಡಾಕೆರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ನಡೆಯುತ್ತದೆ.

ಧಾರಾವಾಹಿಯಲ್ಲಿ ದೈವದ ವೇಷ ಬಳಕೆ,ದೈವಾರಾಧಕ ರಿಂದ ದೂರು ದಾಖಲು

ಮಂಗಳೂರು:ಖಾಸಗಿ ಟಿವಿ ವಾಹಿನಿಯೊಂದು ತನ್ನ ಧಾರವಾಹಿಯಲ್ಲಿ ಕರಾವಳಿಯ ನಂಬಿಕೆ ಭೂತಾರಾಧನೆ ಬಗ್ಗೆ ದೃಶ್ಯಾವಳಿಯನ್ನು ಬಳಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದ್ದು,ಕರಾವಳಿ ಭಾಗದ ದೈವಾರಾಧಕರ ಆಕ್ರೋಶ ಭುಗಿಲೆದ್ದಿದೆ. ಮಾತ್ರವಲ್ಲ ತುಳುನಾಡ ಮಂದಿ ಕೂಡ ಈ ಬಗ್ಗೆ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ವಾಹಿನಿ ಬಗ್ಗೆ ಹಾಗೂ ಧಾರಾವಾಹಿ ತಂಡ ಮತ್ತು ಡೈರೆಕ್ಟರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರ್ ಪ್ರೀತಮ್ ಶೆಟ್ಟಿ ಈ ಧಾರಾವಾಹಿ ಯನ್ನು ನಿರ್ದೇಶನ ಮಾಡುತ್ತಿದ್ದಾರೆ.ದೈವಾರಾಧನೆ ಪ್ರದರ್ಶನ ಧಾರಾವಾಹಿಗೂ ವ್ಯಾಪಿಸಿರುವುದು ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದೆ. ಧಾರಾವಾಹಿಯಲ್ಲಿ […]

ಭರತನಾಟ್ಯ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹೆಮ್ಮಾಡಿ ಜನತಾ ಕಾಲೇಜಿನ ಅಲಕಾ ಹೆಬ್ಬಾರ್

ಹೆಮ್ಮಾಡಿ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ಧಾರವಾಡದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ ಪ್ರಥಮ ಸ್ಥಾನ ಪಡೆದಿರುತ್ತಾರೆ.ಪದವಿ ಪೂರ್ವ ವಿಭಾಗದಿಂದ ಭರತನಾಟ್ಯ ಸ್ಪರ್ಧೆಗೆ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿಯಾಗಿದ್ದು,ಅಲಕಾ ಹೆಬ್ಬಾರ್ ಕಾಲೇಜಿನ ಸಾಂಸ್ಕೃತಿಕ ತಂಡದ ಉದಯೋನ್ಮುಖ ಪ್ರತಿಭೆ ಇದುವರೆಗೆ ನಡೆದ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನ ಮಾಡಿರುತ್ತಾಳೆ ಹಾಗೂ ಸಾಕಷ್ಟು ಬಹುಮಾನಗಳನ್ನು ಪಡೆದಿರುತ್ತಾಳೆ.ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, […]

You cannot copy content of this page